×
Ad

10 ವರ್ಷಗಳ ಹಿಂದೆ ಭಾರತ ದುರ್ಬಲ ಆರ್ಥಿಕ ರಾಷ್ಟ್ರವಾಗಿತ್ತು: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

Update: 2023-12-17 20:29 IST

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಭಾರತ ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರವಾಗಿತ್ತು. ಆದರೆ, ಇವತ್ತು ಜಗತ್ತಿನ 5ನೆ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ರವಿವಾರ ವಸಂತನಗರ ವಾರ್ಡಿನಲ್ಲಿ ಕೇಂದ್ರ ಸರಕಾರದ ಜನಪರ ಯೋಜನೆಗಳ ಮಾಹಿತಿಯ ಆರ್ ಸಿ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುವತ್ತ ದೊಡ್ಡ ಹೆಜ್ಜೆಯನ್ನು ಇಡಲಾಗಿದೆ. ಮುಂದಿನ ಹತ್ತು ವರ್ಷವೂ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

140 ಕೋಟಿ ಜನಸಂಖ್ಯೆ ನಮ್ಮದು. ಎಲ್ಲರ ತಲೆ ಮೇಲೊಂದು ಸೂರು (ಮನೆ) ನಮ್ಮ ಆಶಯ. 1960-2014ರವರೆಗೆ ಸುಮಾರು 54-55 ವರ್ಷಗಳಲ್ಲಿ 3.58 ಕೋಟಿ ಮನೆ ನಿರ್ಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷ ಆಡಳಿತ ಮುಗಿಯುವ ಮೊದಲೇ 4 ಕೋಟಿ ಮನೆಗಳನ್ನು ಕಟ್ಟಿದ್ದೇವೆ. 2025-26ರಲ್ಲಿ ಮನೆ ಇಲ್ಲದ ಎಲ್ಲರಿಗೂ ಮನೆ ಕೊಡುವ ಗುರಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News