×
Ad

ವೇಷ ಬದಲಾಯಿಸಿ ಗಲಭೆ ಎಬ್ಬಿಸುವುದು ಬಿಜೆಪಿ ಹುಟ್ಟುಗುಣ: ಸಚಿವ ರಾಮಲಿಂಗಾರೆಡ್ಡಿ

Update: 2023-10-04 23:37 IST

ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತರೇ ವೇಷ, ಹೆಸರುಗಳನ್ನು ಬದಲಾಯಿಸಿಕೊಂಡು ಕಿಡಿಗೇಡತನ ಮಾಡುತ್ತಾರೆ. ಇದು ಅವರ ಹುಟ್ಟುಗುಣ ಮಾತ್ರವಲ್ಲದೆ, ರಕ್ತದಲ್ಲಿಯೇ ಬಂದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇಲ್ಲದಿದ್ದಾಗ ಕಿತಾಪತಿ ಮಾಡುವುದು ಕಿತ್ತಾಟ ತಂದಿಡುವ ಕೆಲಸ ಮಾಡುತ್ತಾರೆ. ಜತೆಗೆ, ಅನೈತಿಕ ಪೊಲೀಸ್‍ಗಿರಿ ಮಾಡುವ ಮೂಲಕ ಗಲಾಟೆ ಎಬ್ಬಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೇ ವೇಷ ಹಾಗೂ ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡಲು ಮುಂದಾಗುತ್ತಿದ್ದಾರೆ. ಇದೆಲ್ಲ ಅವರ ಹುಟ್ಟುಗುಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭಿಸಿದ್ದು ಈ ಹಿಂದಿನ ಯಪಿಎ ಸರಕಾರವೇ ಹೊರತು ಬಿಜೆಪಿಯಲ್ಲ. ಅಭಿವೃದ್ಧಿ ವಿಚಾರಗಳು ಬಿಜೆಪಿಗೆ ಬೇಕಿಲ್ಲ. ಹೇಳಿಕೆಗಳನ್ನು ನೀಡುವ ಮೂಲಕ ಅವರ ಬೇಳೆಯನ್ನು ಮಾತ್ರ ಬೇಯಿಸಿಕೊಳ್ಳುತ್ತಾರೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News