×
Ad

ಕಲಬುರಗಿ | ಎಟಿಎಂ ದರೋಡೆ; 14 ಲಕ್ಷಕ್ಕೂ ಅಧಿಕ ಹಣ ಕಳವು

Update: 2023-07-23 19:49 IST

ಕಲಬುರಗಿ: ಅಫಜಲಪುರ ಪಟ್ಟಣದ ಹೃದಯ ಭಾಗದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂಗೆ ನುಗ್ಗಿದ ಕಳ್ಳರು ಸುಮಾರು 14 ಲಕ್ಷ 86 ಸಾವಿರ ನಗದು ಹಣ ದೋಚಿ ಪರಾರಿಯಾದ ಘನೆ ರವಿವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಜರುಗಿದೆ.

ಸ್ಥಳಕ್ಕೆ ಕಲಬುರಗಿ ಎಸ್.ಪಿ ಇಶಾ ಪಂತ್, ಹೆಚ್ಚುವರಿ ಎಸ್ ಎನ್. ಶ್ರೀನಿಧಿ, ಡಿವೈಎಸ್ಪಿ ಗೋಪಿ ಬಿ.ಆರ್, ಪಿ.ಎಸ್.ಐ ಭೀಮರಾಯ ಬಂಕ್ಲಿ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

 

 

 

ಸಿಬ್ಬಂದಿ ನಿರ್ಲಕ್ಷ್ಯ?: ಇನ್ನು ಎ.ಟಿ.ಎಂ ಭದ್ರತೆಗಾಗಿ ಬ್ಯಾಂಕಿನ ವ್ಯವಸ್ಥಾಪಕ ಮಂಡಳಿ ಯಾವುದೇ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡದೆ ಇರುವುದೇ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗೂ ಎಟಿಎಂ ಒಡೆದು ಹಣ ದೋಚುವ ಸಂದರ್ಭದಲ್ಲಿ ಕಳ್ಳರು ಗ್ಯಾಸ್ ಕಟರ್ ಉಪಯೋಗಿಸಿದ್ದಾರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News