×
Ad

ಕಲಬುರಗಿ ಪಾಲಿಕೆ ವ್ಯವಸ್ಥಾಪಕ ಅಧಿಕಾರಿ ಅಮಾನತು

Update: 2023-10-12 22:21 IST

ಕಲಬುರಗಿ: ಆಸ್ತಿಯ ಮಾಲಕತ್ವದಲ್ಲಿ ಬದಲಾವಣೆ ವಿಷಯದಲ್ಲಿ ಅವ್ಯಹಾರ ನಡೆಸಿರುವ ಆರೋಪದಲ್ಲಿ ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಅಧಿಕಾರಿಯನ್ನು ಗುರುವಾರ ಅಮಾನತು ಗೊಳಿಸಿ ಕಲಬುರಗಿ ಪಾಲಿಕೆ ಆಯುಕ್ತರು ಆದೇಶ ಹೋರಡಿಸಿದ್ದಾರೆ.

ವಿನೋದಕುಮಾರ ವ೦ಟಿ ಪಾಲಿಕೆಯ ವ್ಯವಸ್ಥಾಪಕರಾಗಿದ್ದ 1966ರ ನಿಯಮ 3(i) (ii) (iii) ನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ಪ್ರಕಾರ ಶಿಸ್ತಿನ ಕ್ರಮಕ್ಕೆ ಗುರಿಯಾಗಿರುತ್ತಾರೆ. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮ 10 (1) (ಡಿ) ಅನ್ವಯ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪಿ.ಐ.ಡಿ ಸಂಖ್ಯೆ 87952 ರ ಮಾಲಕತ್ವದ ಕಸ್ತೂರಿಬಾಯಿ ಹೆಸರಿನಿಂದ ಅಶ್ರುಲ್ಹಾ ಖಾನ್ ರವರ ಹೆಸರಿಗೆ ಆಕ್ರಮವಾಗಿ ಬದಲಾವಣೆ ಮಾಡಿರುತ್ತಾರೆ ಮತ್ತು ಹಳೆಯ ಆಸ್ತಿ ಸಂಖ್ಯೆ 9-5877/9ಎ ನ್ನು ಪ್ಲಾಟ ನಂ 01 ಸರ್ವೆ ನಂ 25/2 ವಕ್ಕಲಗೇರಾ ಖುಲ್ಲಾ ನಿವೇಶನಕ್ಕೆ ಅನಧೀಕೃತವಾಗಿ ಬದಲಾವಣೆ ಮಾಡಿರುವ ಆರೋಪ ಸಾಬಿತಾಗಿರುವ ಹಿನ್ನೆಲೆಯಲ್ಲಿ ಅಮಾನತು ಗೊಳಿಸಲಾಗಿದೆ ಎಂದು ಶಿಸ್ತು ಪ್ರಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ್ ಭುವನೇಶ ದೇವಿದಾಸ್ ತಿಳಿಸಿದ್ದಾರೆ.

2021ರಲ್ಲಿ 43720, 43721, 38103, 43437 ಮತ್ತು 43460 ಅನಧಿಕೃತ ಪಿಐಡಿಗಳು ಉಲ್ಲೇಖಿಸಿ ಉಪ ಆಯುಕ್ತರು ವಿನೋದಕುಮಾರ ಒಂಟಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿದರು. ಈ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇವೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News