×
Ad

"ನಾವೇನು ಕಸ ಗುಡಿಸಲು ಬಂದಿದ್ದೇವೆಯೇ?": ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Update: 2026-06-21 21:11 IST

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಕಾರ್ಯಕರ್ತರ ವಿರುದ್ಧ ಆಕ್ರೋಶಗೊಂಡ ಘಟನೆ ನಡೆಯಿತು.

ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಭಾಷಣದ ವೇಳೆ ಕಾರ್ಯಕರ್ತರು ಜೋರಾಗಿ ‘ಡಿಕೆ, ಡಿಕೆ’ ಎಂದು ಘೋಷಣೆ ಕೂಗುತ್ತಿದ್ದರು. ಈ ವೇಳೆ ಆಕ್ರೋಶಗೊಂಡ ಖರ್ಗೆ, ‘ಇಷ್ಟು ಜನ ಮಾತ್ರ ಕೂಗಿದರೆ ಇಡೀ ದೇಶ ನಿಮ್ಮ ಕೈಗೆ ಸಿಗುತ್ತಾ? ಯೂಸ್ ಲೆಸ್ ಫೆಲೋಸ್. ಎಲ್ಲರೂ ಸೇರಿ ಪಕ್ಷವನ್ನು ಒಂದೂಗೂಡಿಸುವ ವೇದಿಕೆ ಇದು. ಬಾಕಿಯವರು ಏನಕ್ಕೆ ಬಂದಿದ್ದಾರೆ? ಕಸ ಗುಡಿಸಲು ಬಂದಿದ್ದಾರಾ? ಕಾಂಗ್ರೆಸ್ ಶಿಸ್ತಿನ ಪಕ್ಷ, ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆಗೆ ಮಾತ್ರ ಅವಕಾಶ’ ಎಂದು ಬುದ್ಧಿವಾದ ಹೇಳಿದರು.

ಆ ಬಳಿಕ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಇಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ. ವ್ಯಕ್ತಿ ಮುಖ್ಯ ಅಲ್ಲದೇ ಇದ್ದರೂ ಕಾಂಗ್ರೆಸ್ ಬಹಳ ಜನರಿಗೆ ಅವಕಾಶ ಕೊಟ್ಟಿದೆ. ಕಾಂಗ್ರೆಸ್‍ನಿಂದ ಅವರಿಗೆ ಶಕ್ತಿ ಬಂದಿದೆ. ಶಾಂತವಾಗಿ ಎಲ್ಲವನ್ನೂ ಕೇಳಿ. ಇಲ್ಲದಿದ್ದರೆ ನಾನು ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News