×
Ad

ರೇವಣ್ಣ ವಿರುದ್ಧದ ಮಹಿಳೆಯ ಅಪಹರಣ ಪ್ರಕರಣ : ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತೆ

Update: 2024-05-12 21:16 IST

ಬೆಂಗಳೂರು : ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯೊಬ್ಬರು ವಿಡಿಯೊ ಬಿಡುಗಡೆ ಮಾಡಿದ್ದು, ರೇವಣ್ಣ ಕುಟುಂಬದಿಂದ ಯಾವುದೇ ತೊಂದರೆಯಾಗಿಲ್ಲ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ರವಿವಾರ ಸುಮಾರು ಎರಡು ನಿಮಿಷ 32 ಸೆಕೆಂಡ್ ಇರುವ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನಾಗಿ ಮನೆಯಿಂದ ಬಂದಿದ್ದೇನೆ. ಭವಾನಿ, ರೇವಣ್ಣ, ಪ್ರಜ್ವಲ್ ಮತ್ತು ಬಾಬಣ್ಣರಿಂದ ಯಾವುದೇ ತೊಂದರೆ ಆಗಿಲ್ಲ ಎಂದಿದ್ದಾರೆ.

ಅಲ್ಲದೆ, ನಮ್ಮ ಊರಿನವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಹೀಗಾಗಿ 4 ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ, 2 ದಿನಗಳ ಬಳಿಕ ನಾನೇ ಬರುತ್ತೇನೆ ಎಂದು ಉಲ್ಲೇಖಿಸಿದ್ದು, ಗಾಬರಿ ಪಡಬೇಡಿ ಏನೂ ತೊಂದರೆ ಆಗಿಲ್ಲ, ಚನ್ನಾಗಿ ಇದ್ದೇನೆ ವಾಪಸ್ ಬರುತ್ತೇನೆ. ಯಾರೂ ಏನೆ ಅಂದರು ತಲೆಗೆ ಹಾಕಿಕೊಳ್ಳಬೇಡಿ. ಅವರಿಂದ ನಮಗೆ ತೊಂದರೆ ಆಗಿಲ್ಲ. ಮೊಬೈಲ್‍ಗೂ ನಮಗೂ ಸಂಬಂಧವಿಲ್ಲ. ನಾಲ್ಕು ದಿನ ನೆಂಟರ ಮನೆಗೆ ಹೋಗಿದ್ದೆ, ಬಂದು ಎಲ್ಲಿ ಮಾಹಿತಿ ನೀಡಬೇಕಾದರೂ ಕೊಡುತ್ತೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News