×
Ad

ಕೆಎಸ್ಸಾರ್ಟಿಸಿಗೆ ಗ್ರೀನ್‍ಟೆಕ್ ಎಚ್‍ಆರ್ ಪ್ರಶಸ್ತಿಯ ಗರಿ

Update: 2023-08-22 21:57 IST

ಬೆಂಗಳೂರು, ಆ. 22: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಮಾನವ ಸಂಪನ್ಮೂಲ ವರ್ಗದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ಪರಿವರ್ತಿತ ಕಾರ್ಯಸಾಧನೆಗೆ ಗ್ರೀನ್‍ಟೆಕ್ ಫೌಂಡೇಷನ್ ನೀಡುವ ಪ್ರತಿಷ್ಠಿತ ‘ಗ್ರೀನ್‍ಟೆಕ್ ಎಚ್‍ಆರ್’ ಪ್ರಶಸ್ತಿಗೆ ಭಾಜನವಾಗಿದೆ.

ಆ.21ರಂದು ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಇರುವ ಹೋಟೆಲ್ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಎಚ್.ಡಿ.ಗೌರಾಂಭ, ಉಪಮುಖ್ಯ ಗಣಕ ವ್ಯವಸ್ಥಾಪಕ ಎಚ್.ಗುರುರಾಜ್ ಇವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಈ ವೇಳೆ ಅಸ್ಸಾಂ ಮಾಜಿ ರಾಜ್ಯಪಾಲ ಡಾ.ಪ್ರೊ.ಜಗದೀಶ್ ಮುಖಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಅಧ್ಯಕ್ಷ ಗ್ರೀನ್‍ಟೆಕ್ ಫೌಂಡೇಷನ್ ಕಮಲೇಶ್ವರ್ ಶರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News