×
Ad

ಮಡಿಕೇರಿ: ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದ ಕುರುಡು ಕಾಡಾನೆ ಸಾವು

Update: 2023-12-16 15:55 IST

ಮಡಿಕೇರಿ ಡಿ.16 : ಕಳೆದ ಒಂದೂವರೆ ತಿಂಗಳಿನಿಂದ ಆಹಾರಕ್ಕಾಗಿ ಪರದಾಡುತ್ತ ಹಾರಂಗಿ ಹಿನ್ನೀರಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದೃಷ್ಟಿ ದೋಷದ ಹೆಣ್ಣು ಕಾಡಾನೆ ಮೃತಪಟ್ಟಿದೆ.

ಸೋಮವಾರಪೇಟೆ ಸಮೀಪದ ಸಜ್ಜಳ್ಳಿ ಗ್ರಾಮದ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ನಿತ್ರಾಣಗೊಂಡು ಬಿದ್ದಿದ್ದ 35 ವರ್ಷದ ಹೆಣ್ಣು ಕಾಡಾನೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚೇತರಿಸಿಕೊಳ್ಳದ ಕಾಡಾನೆ ಸಾವನ್ನಪ್ಪಿದೆ.

ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದ ಹೆಣ್ಣಾನೆಗೆ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು. ಒಂದು ಕಣ್ಣು ಸಂಪೂರ್ಣವಾಗಿ ಕುರುಡಾಗಿತ್ತು, ಮತ್ತೊಂದು ಕಣ್ಣು ಮಂದವಾಗಿತ್ತು. ಈ ಕಾರಣದಿಂದ ತನಗೆ ಬೇಕಾದ ಆಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾಡಾನೆ ನಿತ್ರಾಣಗೊಂಡಿತ್ತು. ಕುಡಿಯುವ ನೀರಿಗಾಗಿ ಹಾರಂಗಿ ಹಿನ್ನೀರಿಗೆ ಬಂದು ಕುಸಿದು ಬಿದ್ದಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News