×
Ad

ಮಡಿಕೇರಿ: ಮೃತ ಪ್ರದೀಪ್ ಕುಟುಂಬಕ್ಕೆ ರೂ.5 ಲಕ್ಷ ರೂ. ಪರಿಹಾರ

Update: 2023-12-12 14:41 IST

ಮಡಿಕೇರಿ ಡಿ.12 : ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ಪ್ರದೀಪ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.5 ಲಕ್ಷ ಜಮಾ ಮಾಡಲಾಗಿದೆ.

ಪ್ರದೀಪ್ ಪತ್ನಿಯ ಪಂಚವಳ್ಳಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಗೆ ರೂ.5 ಲಕ್ಷ ಜಮಾ ಮಾಡಿರುವುದಾಗಿ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಆಪ್ತರಾದ ಕೆ.ಎಸ್.ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಶಾಸಕ ಪೊನ್ನಣ್ಣ, ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ ಮುಂತಾದವರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತ ಪ್ರದೀಪ್ ಗೆ ಇಬ್ಬರು ಮಕ್ಕಳಿದ್ದು ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News