×
Ad

ರಾಮನಗರದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಮೃತ್ಯು

Update: 2023-12-17 14:24 IST

ಬೆಂಗಳೂರು, ಡಿ.17: ತೋಟದ ಮನೆಗೆ ತೆರಳುತ್ತಿದ್ದ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಇಂದು ಮುಂಜಾನೆ ಹಾರೋಹಳ್ಳಿ ತಾಲೂಕಿನ ಹರಳಿಕರೆ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಅರಳಿಕರೆ ದೊಡ್ಡಿ ಗ್ರಾಮದ ತಿಮ್ಮಪ್ಪ (60) ಎಂದು ಗುರುತಿಸಲಾಗಿದೆ.

ಇಂದು ಮುಂಜಾನೆ ನಾಯಿಗಳು ಬೊಗಳುತ್ತಿದ್ದ ಶಬ್ದ ಕೇಳಿದ ತಿಮ್ಮಪ್ಪ ಏನೆಂದು ನೋಡಲು ತೋಟದ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಒಂಟಿ ಕಾಡಾನೆ ದಾಳಿಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ.

ಪರಿಹಾರಕ್ಕೆ ಡಿಸಿಎಂ ಡಿಕೆಶಿ ಸೂಚನೆ

ಒಂಟಿ ಸಲಗ ದಾಳಿಯಿಂದ ಮೃತಪಟ್ಟಿರುವ ತಿಮ್ಮಪ್ಪರ ಕುಟುಂಬಕ್ಕೆ ಸೂಕ್ತ ಪರಿಹಾರ, ಅವರ ಮಗಳಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಿಂದ ರವಿವಾರ ದೂರವಾಣಿ ಮೂಲಕ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿಎಂ, "ಗ್ರಾಮಸ್ಥರ ಬೇಡಿಕೆಯಂತೆ ಅಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಿ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News