×
Ad

ಮಣಿಪಾಲ: ಪರವಾನಿಗೆ ಇಲ್ಲದೇ ವಿದ್ಯಾರ್ಥಿಗಳ ಪಾರ್ಟಿಗೆ ಅವಕಾಶ; ಬಾರ್ ವಿರುದ್ಧ ಪ್ರಕರಣ ದಾಖಲು

Update: 2023-09-29 11:44 IST

ಮಣಿಪಾಲ: ಪರವಾನಿಗೆ ಇಲ್ಲದೇ ಮನೋರಂಜನಾ ಕಾರ್ಯಕ್ರಮ ಆಯೋಜಿಸಿ ಸಂಗೀತದೊಂದಿಗೆ ನೃತ್ಯಕ್ಕೆ   ಮಾಡಿಕೊಟ್ಟ ಮಣಿಪಾಲದ ಬಾರೊಂದರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ವಿದ್ಯಾನಗರದ ಎಸ್ಸ್ಟೇಸಿ ಎಂಬ ಬಾರ್- ರೆಸ್ಟೋರೆಂಟ್ ನಲ್ಲಿ ಸೆ.25ರಂದು ಸಂಜೆ 5ಗಂಟೆಯಿಂದ ರಾತ್ರಿ 10.30ರವರೆಗೆ ಕೆಲವು ವಿದ್ಯಾರ್ಥಿ ಗಳು ಪಾರ್ಟಿ ಆಯೋಜನೆ ಮಾಡಿ ಮನೋರಂಜನಾ ಕಾರ್ಯಕ್ರಮ ನಡೆಸಿದ್ದರೆನ್ನಲಾಗಿದೆ.

ಪಾರ್ಟಿಯಲ್ಲಿ ಸಂಗೀತ ನುಡಿಸಿರುವುದು ಮತ್ತು ವಿದ್ಯಾರ್ಥಿಗಳ ಫ್ಯಾಶನ್ ಶೋ, ಬಲೂನ್ ಫ್ರೀಜ್, ಡ್ಯಾನ್ಸ್ ಪ್ರೀಜ್ ಎಂಬ ಆಟವನ್ನು ಆಯೋಜಿಸಿ ನೃತ್ಯ ನಡೆಸಿದ್ದರು. ಯಾವುದೇ ಪರವಾನಿಗೆ ಇಲ್ಲದೇ ಮನೋರಂಜನಾ ಕಾರ್ಯಕ್ರಮ ಆಯೋಜಿಸಿರುವ ಬಾರ್ ಸೂಪರ್ವೈಸರ್ ಸುಕೇಶ್ ಮತ್ತು ಮಾಲಕ ದಿನೇಶ್ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News