×
Ad

ಸಿದ್ದರಾಮಯ್ಯನವರ ರಾಜೀನಾಮೆ ಕೇಳಲು ಎಚ್‌ಡಿಕೆಗೆ ನೈತಿಕತೆ ಇಲ್ಲ : ಸಚಿವ ಝಮೀರ್‌ ಅಹ್ಮದ್

Update: 2024-08-22 17:43 IST

 ಎಚ್.ಡಿ.ಕುಮಾರಸ್ವಾಮಿ/ಝಮೀರ್‌ ಅಹ್ಮದ್ ಖಾನ್

ಬೆಂಗಳೂರು : ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಎಚ್.ಡಿ.ಕುಮಾರಸ್ವಾಮಿಗೆ ನೈತಿಕತೆ ಇಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್‌ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲೋಕಾಯುಕ್ತ ತನಿಖೆ ಆಧಾರದ ಮೇಲೆ ಅಕ್ರಮ ನಡೆದಿರುವುದು ಸಾಬೀತು ನಂತರ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂ ಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಎಸ್ಐಟಿ ಮನವಿ ಮಾಡಿ ಹತ್ತು ತಿಂಗಳು ಕಳೆದಿದೆ. ನಿಜವಾಗಿಯೂ ರಾಜೀನಾಮೆ ನೀಡಬೇಕಿರುವುದು ಕುಮಾರಸ್ವಾಮಿ" ಎಂದು ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ನೀಡಿರುವುದು ಖಾಸಗಿ ದೂರು. ಎಫ್‌ಐಆರ್ ಆಗಿಲ್ಲ, ತನಿಖೆಯೂ ನಡೆದಿಲ್ಲ. ಆದರೆ ದೂರು ನೀಡಿದ ದಿನವೇ ನೋಟಿಸ್ ನೀಡಿರುವುದು ಎಷ್ಟು ಸರಿ. ತನಿಖೆಯಲ್ಲಿ ಅಕ್ರಮ ಸಾಬೀತು ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಮೊದಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಿತ್ತು. ನೈತಿಕತೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

"ನೂರು ಸಿದ್ದರಾಮಯ್ಯ ಬಂದರೂ ಏನೂ ಮಾಡಲಾಗದು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅವರು ಒಬ್ಬ ಝಮೀರ್ ನನ್ನು ಫೇಸ್ ಮಾಡಲಿ ಸಾಕು" ಎಂದು ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News