"ಸಿಂಹ ಘರ್ಜಿಸಬೇಕೇ ವಿನಃ, ಬಾಯಿ ಬಡ್ಕೋಬಾರದು": ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ
ಶಾಸಕ ಪ್ರದೀಪ್ ಈಶ್ವರ್ (File photo)
ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ತನ್ನ ಹೆಸರಿಗೆ ತಕ್ಕಂತೆ ಘರ್ಜಿಸಬೇಕೇ ವಿನಃ, ಹೊರಗೆ ಬಂದು ಬಾಯಿ ಬಡ್ಕೋಬಾರದು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ನಿನಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಲಿಲ್ಲ ಏಕೆ?. ಅಲ್ಲದೆ, ದೇಶದ್ರೋಹಿಗಳಿಗೆ ಸಂಸತ್‍ನೊಳಗೆ ಪ್ರವೇಶಿಸಲು ಏಕೆ ಪಾಸು ನೀಡಿದ್ದರು ಎನ್ನುವುದು ಪ್ರತಾಪ್ ಸಿಂಹ ಜನತೆಗೆ ಹೇಳಬೇಕು. ಹೀಗೆ, ಪ್ರತಾಪ್ ಸಿಂಹ ವಿಚಾರವೂ ಬಿಚ್ಚಿಡಲು ನಮಗೂ ಹೆಚ್ಚು ಸಮಯ ಬೇಕಾಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕ ಸುಬ್ಬಾರೆಡ್ಡಿ ಅವರು ಬಡತನದಿಂದ ಮೇಲೆ ಬಂದವರು. ಸತತ ಮೂರು ಬಾರಿ ಶಾಸಕರಾಗಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಈಡಿ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಿ ಈ ರೀತಿಯ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.