×
Ad

ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ: ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ

Update: 2023-12-27 22:29 IST

ಪ್ರತಾಪ್ ಸಿಂಹ (Photo: Facebook)

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಬುಧವಾರ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಅವರು, ನೀವು ಕಲ್ಲು ಬಿಸಾಡಿದರೆ ನಾನು ಹಣ್ಣು ಕೊಡುವುದಿಲ್ಲ, ಕಲ್ಲು ಬೀಸಿದರೆ ಹಣ್ಣು ಕೊಡಲು ನಾನು ಮರವಲ್ಲ. ನಾನು ಸಹ ತೀವ್ರವಾಗಿಯೇ ಕಲ್ಲು ಬಿಸಾಡುತ್ತೇನೆ ಎಂದು ಕಿಡಿಕಾರಿದ್ದಾರೆ.

"ನಿಮ್ಮ ಕಾಂಗ್ರೆಸ್ ಫೇಸ್ ಬುಕ್ ಪೇಜ್ ನಲ್ಲಿ ಅಣ್ಣ ನಾಡಕಳ್ಳ, ತಮ್ಮ ಮರಗಳ್ಳ ಅಂತ ಬರೆದುಕೊಂಡಿದ್ದೀರಿ. ಈ ರೀತಿ ಬರೆದು ನನ್ನ ಬಳಿ ನೀವು ಯಾವ ರೀತಿ ಗೌರವ ಕೊಡಿ ಎಂದು ಕೇಳುತ್ತೀರಾ" ಎಂದು ಪ್ರಶ್ನಿಸಿದ್ದಾರೆ.

"ಎಫ್‍ಐಆರ್ ನಲ್ಲಿ ನನ್ನ ತಮ್ಮನ ಹೆಸರಿಲ್ಲ, ನನ್ನ ಅಭಿವೃದ್ಧಿ ಕೆಲಸಗಳು ಬಹಳಷ್ಟು ಜನರ ಕಣ್ಣು ಕುಕ್ಕುತ್ತಿದೆ. ಹೀಗಾಗಿ ಈ ರೀತಿ ತಿರುಚುತ್ತಿದ್ದಾರೆ. ಮೈಸೂರಿನಲ್ಲಿ ನಿಮ್ಮ ಬಾಲಬರುಕರು ಬಹಳಷ್ಟು ಜನ ಹುಟ್ಟುಕೊಂಡಿದ್ದಾರೆ. ಅದರಲ್ಲಿ ಸ್ವಲ್ಪ ಜನ ಲೋಕಸಭಾ ಚುನಾವಣಾ ಆಕಾಂಕ್ಷಿಗಳಿದ್ದಾರೆ. ಮೊದಲು ನೀವು ಅಭ್ಯರ್ಥಿ ಹೆಸರು ಘೋಷಣೆ ಮಾಡಿ, ಆವಾಗ ಅವರೇ ಕಿತ್ತಾಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

Full View



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News