×
Ad

ಮೈಸೂರು ದಸರಾ | ಅಕ್ಟೋಬರ್ 23 ರಂದು ಏರ್‌ ಶೋ

Update: 2023-10-10 19:52 IST

ಮೈಸೂರು,ಅ.10: ಅಕ್ಟೋಬರ್ 22 ಮತ್ತು 23 ರಂದು ದಸರಾ ಅಂಗವಾಗಿ ಏರ್ ಶೋ ನಡೆಯಲಿದೆ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್ ತಿಳಿಸಿದ್ದಾರೆ.

ʻಅಕ್ಟೋಬರ್ 22ರಂದು ಏರ್ ಶೋ ಪ್ರಾಯೋಗಿಕವಾಗಿ ನಡೆಯಲಿದ್ದು, ಅಕ್ಟೋಬರ್ 23ರಂದು ಪೂರ್ಣಪ್ರಮಾಣದ ಏರ್ ಶೋ ಆಯೋಜನೆ ಆಗಲಿದೆ. ರಿಹರ್ಸಲ್ ಮತ್ತು ಪೂರ್ಣ ಪ್ರಮಾಣದ ಏರ್ ಶೋ ಎರಡು ಕೂಡ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿವೆ. ಸಂ.4 ಗಂಟೆಗೆ ಏರ್ ಶೋ ಆರಂಭವಾಗಲಿದೆ. ಒಟ್ಟು 45 ನಿಮಿಷ ಏರ್ ಶೋ‌ ನಡೆಯಲಿದೆʻ ಎಂದರು.

ʼದಸರಾ ಉದ್ಘಾಟನೆಗೆ ಹಂಸಲೇಖ ಅವರಿಗೆ ಸಧ್ಯದಲ್ಲಿಯೇ ಅಧಿಕೃತ ಆಹ್ವಾನ ನೀಡಲಾಗುವುದು. ಶಿಷ್ಟಾಚಾರ ಪಾಲನೆ ಮಾಡಬೇಕಾಗಿರುವುದರಿಂದ ಸ್ವಲ್ಪ ತಡವಾಗಿದೆʼ

-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ಮೈಸೂರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News