×
Ad

ಪಾವಗಡ: ಅನಾರೋಗ್ಯದಿಂದ ಯೋಧ ನಿಧನ

Update: 2023-10-16 23:44 IST

ಪಾವಗಡ: ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಬಿಎಸ್‌ಎಫ್ ಯೋಧನೋರ್ವ ಚಿಕಿತ್ಸೆ ಫಲಕಾರಿಯಾಗದೇ ಪಂಜಾಬ್‌ನ ಪಠಾಣ್ ಕೋರ್ಟ್ ನಲ್ಲಿ ರವಿವಾರ ನಿಧನರಾಗಿದ್ದಾರೆ.

ಮೃತಯೋಧನನ್ನು ತಾಲೂಕಿನ ಶ್ರೀರಂಗಪುರ ನಿವಾಸಿ ಜಯರಾಮರೆಡ್ಡಿ ಹಾಗೂ ಸುನಂದಮ್ಮ ದಂಪತಿಯ ಹಿರಿಯ ಪುತ್ರ ಎಸ್.ಜಿ.ಸುರೇಶ್ ಕುಮಾರ್ (36)ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಎಸ್.ಜಿ.ಸುರೇಶ್‌ಕುಮಾರ್ ಪಂಜಾಬ್‌ನ ಪಠಾಣ್ ಕೋಟ್‌ನಲ್ಲಿ ಬಿಎಸ್‌ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ತಮ್ಮ ಊರಿಗೆ ಬಂದು ಹೋಗಿದ್ದರು. ಆದರೆ ಕಿಡ್ನಿ ವೈಫಲ್ಯದಿಂದ ಚಂಡೀಗಢ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾರೆ.

ಹುತ್ಮಾತ ಯೋಧನ ಪಾರ್ಥೀವ ಶರೀರ ಸೋಮವಾರ ಮಧ್ಯರಾತ್ರಿ ಸ್ವಗ್ರಾಮಕ್ಕೆ ಬರಲಿದ್ದು, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News