×
Ad

"ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ": ಧರ್ಮಸ್ಥಳ ಪ್ರಕರಣ ಕುರಿತ ಆರ್. ಅಶೋಕ್ ಹೇಳಿಕೆಗೆ ಪ್ರಕಾಶ್‌ ರಾಜ್ ಆಕ್ರೋಶ

Update: 2025-07-29 23:57 IST

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್‌ ರಾಜ್, "ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, "ಅಲ್ರೀ ⁦ಆಶೋಕ್‌⁩ ಅವರೆ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ, ಅಮಾನವೀಯ ಹತ್ಯೆಗಳಾಗಿವೆ,ಜನರ ಆಕ್ರೋಶ ಭುಗಿಲೆದ್ದಿದೆ. ಕೊನೆಗೂ ಸರ್ಕಾರ ಸ್ಪಂದಿಸಿ SIT ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಮದ್ಯದಲ್ಲಿ ನಿಮ್ದೇನ್ರಿ. ನೀವು ಜನ ಪ್ರತಿನಿಧಿಗಳಾ.. ಅಥವಾ ಇನ್ಯಾರದೋ ದಲ್ಲಾಳಿಗಳಾ.. #justasking" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣದ ದೂರುದಾರ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರಕಾರ ಇದೆʼ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೋಮವಾರ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News