ರಾಜ್ಯದ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.14 : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕ ಗೌರವಕ್ಕೆ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
ಇವರಲ್ಲಿ ಲೋಕಾಯುಕ್ತ ಬೆಂಗಳೂರು ಕೇಂದ್ರದಲ್ಲಿ ಎಸ್ಪಿ ಆಗಿರುವ ಎಸ್.ಬದರಿನಾಥ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಇನ್ನುಳಿದ 18 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರಕಿದೆ.
ರಾಜ್ಯ ಗುಪ್ತಚರ ಐಜಿಪಿ ಡಾ.ಚಂದ್ರಗುಪ್ತ, ಬೆಂಗಳೂರು ಗುಪ್ತಚರ ವಿಭಾಗದ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು, ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಅಪರಾಧ ವಿಭಾಗದ ಎಐಜಿಪಿ ಕಲಾ ಕೃಷ್ಣಸ್ವಾಮಿ, ಕೆಎಸ್‍ಆರ್‌ಪಿ 9ನೇ ಪಡೆಯ ಕಮಾಂಡರ್ ಡಾ.ರಾಮಕೃಷ್ಣ ಮುದ್ದೇಪಾಲ, ಸಿಐಡಿ ವಿಭಾಗದ ಎಸ್ಪಿ ಎನ್.ವೆಂಕಟೇಶ್, ಬೆಂಗಳೂರಿನ ಕೆ.ಜಿ.ಹಳ್ಳಿ ಉಪವಿಭಾಗ ಎಸಿಪಿ ಪ್ರಕಾಶ್ ರಾಠೋಡ, ಬೆಂಗಳೂರಿನ ಮಹಾದೇವಪುರ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಜಿ.ಪ್ರವೀಣ್ ಬಾಬು, ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಎಸ್.ಸತೀಶ್, ಬೆಂಗಳೂರು ಜಿಲ್ಲೆಯ ನಂದಗುಡಿ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಶಾಂತಾರಾಮ, ಬೆಸ್ಕಾಂ ಜಾಗೃತದಳದ ಪೊಲೀಸ್ ಇನ್‍ಸ್ಪೆಕ್ಟರ್ ಎಡ್ವಿನ್ ಪ್ರದೀಪ್.ಎಸ್, ಬೆಂಗಳೂರು ಎಸ್‍ಸಿಆರ್‌ಬಿ ಪಿಎಸ್ಸೈ ಜೆ.ಝಾನ್ಸಿರಾಣಿ, ಗದಗ ಡಿಪಿಓ ಎಆರ್‌ಎಸ್‍ಐ ಗುರುರಾಜ ಮಹಾದೇವಪ್ಪ ಬೂದಿಹಾಳ, ಬೆಂಗಳೂರು ಕೆಎಸ್‍ಆರ್‌ಪಿ 4ನೇ ಕಾರ್ಯಪಡೆಯ ಆರ್‌ಎಚ್‍ಸಿ ರಾಕೇಶ್.ಎಂ.ಜೆ., ಕೊಪ್ಪಳದ ಡಿಪಿಓ ಗಣಕಯಂತ್ರ ವಿಭಾಗದ ಹೆಡ್ ಕಾನ್‍ಸ್ಟೇಬಲ್ ಶಂಸುದ್ದೀನ್, ಬೆಂಗಳೂರು ನಗರ ಗುಪ್ತಚರ ಹೆಡ್‍ಕಾನ್‍ಸ್ಟೇಬಲ್ ವೈ.ಶಂಕರ್, ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಹೆಡ್‍ಕಾನ್‍ಸ್ಟೇಬಲ್ ಅಲಂಕಾರ್ ರಾಕೇಶ್, ಬೆಂಗಳೂರು ಗುಪ್ತಚರ ವಿಭಾಗದ ಸಿವಿಲ್ ಹೆಡ್‍ಕಾನ್‍ಸ್ಟೆಬಲ್ ಎಲ್.ರವಿ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ.