×
Ad

ಕೆ.ಸುಧಾಕರ್ ಅವರು ವಿಜಯೇಂದ್ರ ಶಕ್ತಿ ಬಗ್ಗೆ ಮಾತನಾಡುವುದು ಬೇಡ : ಪ್ರೀತಂ ಗೌಡ

Update: 2025-01-30 15:18 IST

ಬೆಂಗಳೂರು : ʼನಾಲ್ಕೈದು ವರ್ಷಗಳ ಹಿಂದೆ ಪಕ್ಷ ಸೇರಿರುವವರಿಗೆ ಚುನಾವಣಾ ಪ್ರಕ್ರಿಯೆ ಗೊತ್ತಿರಲ್ಲʼ ಎಂದು ಬಿಜೆಪಿಯ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಸಂಸದ ಡಾ.ಕೆ ಸುಧಾಕರ್ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ʼ ಇಡೀ ಪಕ್ಷ ತಾವು ಹೇಳಿದಂತೆ ಕೇಳಬೇಕು ಎಂಬ ಮನಸ್ಥಿತಿಯಿಂದ ಸುಧಾಕರ್ ಹೊರಗೆ ಬರಬೇಕು. ಅವರು ಸಂಸದರಾದ ಮಾತ್ರಕ್ಕೆ ಇಡೀ ಚಿಕ್ಕಬಳ್ಳಾಪುರವನ್ನು ಅವರಿಗೆ ಬರೆದು ಕೊಡಲಾಗದು. ಅವರು ಪಕ್ಷಕ್ಕೆ ಬಂದು ಐದು ವರ್ಷವಷ್ಟೇ ಆಗಿದೆʼ ಎಂದು ಹೇಳಿದರು.

ʼಸುಧಾಕರ್ ಅವರಿ​ಗೆ ಈ ಐದು ವರ್ಷದಲ್ಲಿ ಮೂರು ಬಾರಿ ಪಕ್ಷ ಬಿ ಫಾರಂ ಕೊಟ್ಟಿದೆ. ನಾಲ್ಕು ವರ್ಷ  ಅವರನ್ನು ಸಚಿವರಾಗಿ ಮಾಡಲಾಗಿದೆ. ಅವರಿಗೆ ರಾಜ್ಯಾಧ್ಯಕ್ಷನಾಗಿ, ಸಿಎಂ ಆಗುವ ಲೆಕ್ಕಾಚಾರ ಇರಬಹುದು, ಅದು ನನಗೆ ಗೊತ್ತಿಲ್ಲʼ ಎಂದು ತಿರುಗೇಟು  ನೀಡಿದರು.

ಸುಧಾಕರ್ ಅವರು ವಿಜಯೇಂದ್ರ ಅವರ ಶಕ್ತಿ ಬಗ್ಗೆ ಮಾತನಾಡುವುದು ಬೇಡ. ಅವರು ತಮ್ಮ ಮಾತಿನ ರೀತಿ ಬದಲಾಯಿಸಿಕೊಳ್ಳಬೇಕು. ಸೋತಿದ್ದ ಸುಧಾಕರ್​ಗೆ ಪಕ್ಷ ಮತ್ತೆ ಕೈ ಹಿಡಿದು ಸಂಸದರಾಗಿ ಮಾಡಿದೆ. ಸುಧಾಕರ್ ಪಕ್ಷದ ವ್ಯವಸ್ಥೆ ಅರ್ಥ‌ಮಾಡಿಕೊಳ್ಳಬೇಕು ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News