ಜ.1ಕ್ಕೆ ತರಗತಿಗಳಿಗೆ ಹಾಜರಾಗುವ ಅತಿಥಿ ಉಪನ್ಯಾಸಕರ ಮಾಹಿತಿ ಒದಗಿಸಿ: ಕಾಲೇಜು ಶಿಕ್ಷಣ ಇಲಾಖೆ
Update: 2023-12-30 22:07 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಜ.1ರಂದು ತರಗತಿಗಳಿಗೆ ಹಾಜರಾಗಿರುವ ಮಾಹಿತಿಯನ್ನು ಅಂದು ಮಧ್ಯಾಹ್ನ 2ಗಂಟೆಯೊಳಗೆ ಇಲಾಖೆಯ ವೆಬ್‍ಸೈಟ್‍ನಲ್ಲಿರುವ ಗೂಗಲ್ ಪಾರ್ಮ್‍ನಲ್ಲಿ ನಮೂದಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ಕಾಲೇಜು ಪ್ರಾಂಶುಪಾಲರಿಗೆ ತಿಳಿಸಿದೆ.
ಅತಿಥಿ ಉಪನ್ಯಾಸಕರು ನ.23ರಿಂದ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದರು. ಶುಕ್ರವಾರದಂದು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಜ.1ರಿಂದ ಮುಷ್ಕರ ಬಿಟ್ಟು ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅತಿಥಿ ಉಪನ್ಯಾಸಕರು ಹಾಜರಾಗದಿದ್ದಲ್ಲಿ, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ ಎಂದು ತಿಳಿಸಿದೆ.