×
Ad

2024ರ ಮಾರ್ಚ್ ತಿಂಗಳಲ್ಲಿ ಪುನೀತ್‌ ಉಪಗ್ರಹ ಉಡಾವಣೆ ಸಾಧ್ಯತೆ

Update: 2023-10-26 23:51 IST

ಬೆಂಗಳೂರು, ಅ. 26: ರಾಜ್ಯದ ಸರಕಾರಿ ಶಾಲಾ ಮಕ್ಕಳು ನಿರ್ಮಿಸಿರುವ ಪುನೀತ್ ಉಪಗ್ರಹ ಉಡಾವಣೆಗೆ 2024ರ ಮಾರ್ಚ್ ತಿಂಗಳಲ್ಲಿ ಇಸ್ರೋ ಅವಕಾಶ ನೀಡುವ ಭರವಸೆಯಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಪುನೀತ್ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಸದಸ್ಯರೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ ಮತ್ತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

‘ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ಯೂಬ್‍ಸ್ಯಾಟ್ ಸಬ್‍ಸಿಸ್ಟಮ್ಸ್ ವಿಷಯದಲ್ಲಿ ತರಬೇತಿ ನೀಡಲಾಗಿದ್ದು, ವಿದ್ಯಾರ್ಥಿಗಳು ಪುನೀತ್ ಸ್ಯಾಟಲೈಟ್‍ನ ಮೂಲಕ ಕಳುಹಿಸಲಾಗುವ ಸೆಕಂಡರಿ ಪ್ಲೇಲೋಡ್‍ಗಳನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಕ್ಯೂಬ್‍ಸ್ಯಾಟ್ ಸಬ್‍ಸಿಸ್ಟಮ್ಸ್‍ನ ಪ್ರೊಟೊಟೈಪ್ ಇವಾಲ್ಯೂವೇಷನ್ ಬೋರ್ಡರ್ಸ್‌ ಗಳ ವ್ಯಾಲಿಡೇಷನ್ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ.

ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಸೂಚಿಸಲಾಗಿರುವ ಅಗತ್ಯ ಮಾರ್ಪಾಡುಗಳನ್ನು ಅಳವಡಿಸಲಾಗುತ್ತಿದೆ. ಐಟಿಸಿಎ ತಂಡ ಮಾರ್ಚ್ ಪುನೀತ್ ಸ್ಯಾಟ್ ಉಡಾವಣೆ ಸಾಧ್ಯ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಇಸ್ರೋ ಜೊತೆಗೆ ನಿರಂತರ ಸಂಪರ್ಕದಲ್ಲಿರುವಂತೆ ಸಂಸ್ಥೆಯ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News