×
Ad

ಕಾಂಗ್ರೆಸ್ ಪಕ್ಷ​ 60 ಪರ್ಸೆಂಟ್​ ಲಂಚ ಹೊಡೆದು ರಾಜ್ಯವನ್ನು ಲೂಟಿ ಮಾಡುತ್ತಿದೆ : ಆರ್‌.ಅಶೋಕ್​

Update: 2024-11-11 14:46 IST

ಆರ್‌.ಅಶೋಕ್

ಬೆಂಗಳೂರು : "ಹಿಂದಿನ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಸರಕಾರ ಎಂದು ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ‌60 ಪರ್ಸೆಂಟ್ ಲಂಚ ಹೊಡೆದು ರಾಜ್ಯವನ್ನು ಲೂಟಿ ಮಾಡುತ್ತಿದೆ" ಎಂದು‌ ರಾಜ್ಯ ಸರಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, "ನಗರಾಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಖಾಸಗಿ ಕಂಪನಿಯೊಂದು ಏಪ್ರಿಲ್ 22ರಂದು ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಸರಕಾರದ ಶೇ.60 ಲಂಚಾವತಾರದ ಮುಖವಾಡವನ್ನು ಬಯಲು ಮಾಡಿದೆ"

"ಸಿಎಂ ಸಿದ್ದರಾಮಯ್ಯನವರೇ ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರ ಸಂಘ ಬರೆದಿರುವ ಪತ್ರದಲ್ಲಿ 700 ಕೋಟಿ ರೂಪಾಯಿ ಲಂಚದ ಬಗ್ಗೆ ಆರೋಪ ಮಾಡಿದ್ದಾರೆ, ಈಗ ಖಾಸಗಿ ಕಂಪನಿಯೊಂದು ಶೆ.60 ಕಮಿಷನ್ ಆರೋಪ ಮಾಡುತ್ತಿದೆ. ದಿನ ಬೆಳಗಾದರೆ ಒಂದು ಹೊಸ ಹಗರಣದ ಕಥೆ ಕೇಳಿ ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನದರೂ ಉಳಿಸಿಕೊಳ್ಳಿ" ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News