×
Ad

ರಾಯಚೂರು: ತಂದೆಯಿಂದಲೇ ಮಗುವಿನ ಕೊಲೆ

Update: 2023-09-05 17:34 IST

ಅಭಿನವ- ಮೃತ ಮಗು

ರಾಯಚೂರು. ಸೆ.5: ತಂದೆಯೊಬ್ಬ ತನ್ನ 14 ತಿಂಗಳ ಮಗುವನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸವಿಯ ಗ್ರಾಮದಲ್ಲಿ ವರದಿಯಾಗಿದೆ. 

ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ 32 ವರ್ಷದ ಮಹಾಂತೇಶ್ ಆರೋಪಿಯಾಗಿದ್ದು, ಮೃತ ಮಗುವನ್ನು ಅಭಿನವ (14) ಎಂದು ಗುರುತಿಸಲಾಗಿದೆ.

ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ಆರೋಪಿ ಮಗುವನ್ನು ಕೊಲೆ ಮಾಡಿ ಕನಸವಿ ಗ್ರಾಮದ ಹೊರವಲಯದಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಪತ್ನಿ ಭೀಮವ್ವ ಮುದಗಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದರು. 

ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದಿದೆ. ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ಮಗುವಿನ ಮೃತದೇಹವನ್ನು ಸುಟ್ಟಿರುವುದಾಗಿ ಹೇಳಿದ್ದ. ಮೂರು ದಿನಗಳ ಬಳಿಕ ಶವ ಬಚ್ಚಿಟ್ಟಿರುವ ಸ್ಥಳವನ್ನು ತೋರಿಸಿದ್ದಾನೆನ್ನಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News