×
Ad

ಸಭೆ, ಸಮಾರಂಭಗಳಿಗೆ ಒಪ್ಪಂದದ ಆಧಾರದ ಮೇಲೆ ಒದಗಿಸುವ ಕೆಎಸ್ಸಾರ್ಟಿಸಿ ಬಸ್ ದರ ಪರಿಷ್ಕರಣೆ; ಆಗಸ್ಟ್ 1ರಿಂದ ಜಾರಿ

Update: 2023-07-27 23:21 IST

ಬೆಂಗಳೂರು, ಜು. 27: ಮದುವೆ ಸಹಿತ ಇನ್ನಿತರ ಸಭೆ, ಸಮಾರಂಭಗಳಿಗೆ ಒಪ್ಪಂದದ ಆಧಾರದ ಮೇಲೆ ಒದಗಿಸುವ ಸಾರಿಗೆ ಬಸ್‍ಗಳ ದರವನ್ನು ಪರಿಷ್ಕರಣೆ ಮಾಡಿ ಕೆಎಸ್ಸಾರ್ಟಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್‍ಗಳ ದರ ಪರಿಷ್ಕರಣೆ ಮಾಡಲಾಗಿದೆ. ಮೈಸೂರು ವ್ಯಾಪ್ತಿಯಲ್ಲಿ ಗಂಟೆ ಆಧಾರದಲ್ಲಿ ವಾಹನಗಳನ್ನ ಒದಗಿಸುವ ವ್ಯವಸ್ಥೆಯನ್ನು ಕೈಬಿಟ್ಟಿದೆ. 

ಪರಿಷ್ಕೃತ ದರ ಆಗಸ್ಟ್ ಒಂದರಿಂದ ಜಾರಿಯಾಗಲಿದೆ. ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್‍ಗಳಿಗೆ ಈ ಹಿಂದಿನ ದರ ಮುಂದುವರಿಕೆಯಾಗಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News