ಶಿಲ್ಪಾ ನಾಗ್ ಸಿ.ಟಿ. ಅವರಿಗೆ ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಹೆಚ್ಚುವರಿ ಹೊಣೆ
Update: 2026-07-20 12:59 IST
ಬೆಂಗಳೂರು: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಕಮಿಷನರ್ ಆಗಿರುವ ಶಿಲ್ಪಾ ನಾಗ್ ಸಿ.ಟಿ. ಅವರಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವ್ಯವಸ್ಥಾಪಕ ನಿರ್ದೇಶಕಿಯ (MD) ಹೆಚ್ಚುವರಿ ಹೊಣೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ನೇಮಕಾತಿ ಇರಲಿದ್ದು, ಇದುವರೆಗೆ ಈ ಹುದ್ದೆಯ ಹೆಚ್ಚುವರಿ ಉಸ್ತುವಾರಿ ಹೊಂದಿದ್ದ ಝೆಹ್ರಾ ನಸೀಮ್ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ.