ರಾಜ್ಯಾದ್ಯಂತ 41 ಲಕ್ಷಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆ ಪೂರ್ಣ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.29: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಲ್ಲಿಯ ವರೆಗೆ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ 41,22,865 ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಸೋಮವಾರ ಒಂದೇ ದಿನ 13,86,969 ಕುಟುಂಬಗಳ ಸಮೀಕ್ಷೆ ನಡೆದಿದೆ. ರವಿವಾರದ ವರೆಗೆ 27,35,879 ಕುಟುಂಬಗಳ ಹಾಗೂ ಇದುವರೆಗೆ 1.56 ಕೋಟಿಗೂ ಅಧಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ಇಲ್ಲಿಯವರೆಗೂ ಚಾಮರಾಜನಗರ 78,176, ಚಿಕ್ಕಬಳ್ಳಾಪುರ 95,734, ಚಿಕ್ಕಮಗಳೂರು 1,12,222, ಚಿತ್ರದುರ್ಗ 1,64,109, ದಕ್ಷಿಣ ಕನ್ನಡ 80,494, ದಾವಣಗೆರೆ 1,79,048, ಧಾರವಾಡ 1,42,382, ಗದಗ 1,13,833, ಹಾಸನ 1,73,570, ಹಾವೇರಿ 1,85,413 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ಕಲಬುರಗಿ ಜಿಲ್ಲೆಯಲ್ಲಿ 1,65,261, ಕೊಡಗು 41,154, ಕೋಲಾರ 1,14,761, ಕೊಪ್ಪಳ 1,41,182, ಮಂಡ್ಯ 1,81,148, ಮೈಸೂರು 1,70,437, ರಾಯಚೂರು 1,15,698, ಶಿವಮೊಗ್ಗ 1,50,255, ತುಮಕೂರು 2,17,692, ಉಡುಪಿ 50,748, ಉತ್ತರ ಕನ್ನಡ 1,03,268, ವಿಜಯನಗರ 91,706, ವಿಜಯಪುರ 1,26,130 ಮತ್ತು ಯಾದಗಿರಿ ಜಿಲ್ಲೆಯಲ್ಲಿ 74,658 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.