×
Ad

ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ; ಬೆಳಗಾವಿಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

Update: 2023-12-16 13:49 IST

ಬೆಂಗಳೂರು: ಮಹಿಳೆಯನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದ ಘಟನೆಯ ಸಂಬಂಧ ವಿವರ ಪಡೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಚಿಸಿರುವ ಬಿಜೆಪಿ ಸತ್ಯಶೋಧನಾ ಸಮಿತಿ ಇಂದು ಬೆಳಗಾವಿಗೆ ಆಗಮಿಸಿದೆ.

ಸಂಸದರಾದ ಶ್ರೀಮತಿ ಅಪರಾಜಿತಾ ಸಾರಂಗಿ, ಶ್ರೀಮತಿ ಸುನಿತಾ ದುಗ್ಗಲ್, ಶ್ರೀಮತಿ ರಂಜಿತಾ ಕೋಲಿ, ಶ್ರೀಮತಿ ಲಾಕೆಟ್ ಚಟರ್ಜಿ ಅಲ್ಲದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆಶಾ ಲಾಕ್ರಾ ಅವರ ನಿಯೋಗವು ಬೆಳಿಗ್ಗೆ ಬೆಳಗಾವಿ ವಿಮಾನನಿಲ್ದಾಣಕ್ಕೆ ಆಗಮಿಸಿತು.

ನಿಯೋಗವು ಸಂತ್ರಸ್ತೆಯನ್ನು ಭೇಟಿ ಮಾಡಿ ಧೈರ್ಯ ಹೇಳುವುದಲ್ಲದೆ, ಘಟನೆಯ ಮಾಹಿತಿ ಪಡೆದಿದೆ.

ಈ ಸಂದರ್ಭದಲ್ಲಿ ಸಂಸದೆ ಶ್ರೀಮತಿ ಮಂಗಳಾ ಅಂಗಡಿ, ಜಿಲ್ಲಾಧ್ಯಕ್ಷರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News