×
Ad

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾನೂನು ತೊಡಕಿದೆ: ಸಚಿವ ಎಂ.ಸಿ.ಸುಧಾಕರ್

Update: 2024-01-02 20:36 IST

ಬೆಂಗಳೂರು: ಅತಿಥಿ ಉಪನ್ಯಾಸಕರ ಖಾಯಮಾತಿ ಮಾಡಲು ಕಾನೂನು ತೊಡಕಿದ್ದು, ಯಾವುದೇ ರಾಜ್ಯದಲ್ಲೂ ಖಾಯಂ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರದ್ದು ಅನೇಕ ಸಂಘಟನೆಗಳಿವೆ. ಒಂದೊಂದು ಸಂಘಟನೆಯವರು ಒಂದೊಂದು ಬೇಡಿಕೆಯನ್ನು ಇಟ್ಟಿದ್ದಾರೆ. ಕೆಲವರು ಖಾಯಮಾತಿ ಮಾಡಲು ಪಟ್ಟು ಹಿಡಿದಿದ್ದಾರೆ. ಈಗ ಅವರನ್ನು ಖಾಯಂ ಮಾಡಿದರೆ ನ್ಯಾಯಾಲಯದಲ್ಲಿ ಸಮಸ್ಯೆ ಆಗಬಹುದು ಎಂದರು.

ಭರ್ತಿ ಮಾಡುವ ವೇಳೆ ಕೃಪಾಂಕದ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತದೆ. 6 ಸಾವಿರ ಅತಿಥಿ ಉಪನ್ಯಾಸಕರು ಕೆಲಸಕ್ಕೆ ಹಾಜರಾಗಿದ್ದಾರೆ. 7 ಸಾವಿರ ಹುದ್ದೆಯನ್ನು ಹೆಚ್ಚುವರಿ ನೇಮಕಾತಿ ಮಾಡಲು ಬೇಡಿಕೆ ಇದೆ. 1,242 ಖಾಲಿ ಹುದ್ದೆ ಭರ್ತಿ ಮಾಡಬೇಕಾಗಿದೆ. ಇದಕ್ಕೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಕ್ಲಸ್ಟರ್ ವಿವಿಗಳಿಗೆ ಸಹಾಯಕ ಪ್ರಾಧ್ಯಾಪಕರ 250 ಹುದ್ದೆ ಖಾಲಿ ಇವೆ. 450-500 ಹೆಚ್ಚುವರಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ಪಡೆದು ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News