ಉಡುಪಿ: ಲಿಫ್ಟ್‌ನಲ್ಲಿ ಕುಸಿದು ಬಿದ್ದು ಹೊಟೇಲ್ ಉದ್ಯೋಗಿ ಮೃತ್ಯು
Update: 2023-09-26 11:16 IST
ಸಾಂದರ್ಭಿಕ ಚಿತ್ರ
ಉಡುಪಿ, ಸೆ.26: ಉಡುಪಿಯ ಹೊಟೇಲೊಂದರ ಉದ್ಯೋಗಿ ಲಿಫ್ಟ್‌ನಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಹೋಟೆಲಿನ ಬಾರ್ ಕ್ಯಾಪ್ಟನ್ ರಾಜ್(51) ಎಂದು ಗುರುತಿಸಲಾಗಿದೆ. ಇವರು ಲೆಡ್ಜರ್ ಬುಕ್ ತರಲು 8ನೇ ಮಹಡಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಲಿಫ್ಟ್ ಒಳಗಯೇ ಕುಸಿದು ಬಿದ್ದರೆನ್ನಲಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಪರೀಕ್ಷಿಸಿದ ವೈದ್ಯರು ರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.