×
Ad

ಯುಜಿಸಿಇಟಿ/ನೀಟ್: ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ

Update: 2025-07-25 17:58 IST

ಬೆಂಗಳೂರು : ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ಶುಕ್ರವಾರ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಅಭ್ಯರ್ಥಿಗಳು ಕೆಇಎ ವೆಬ್‍ಸೈಟ್ ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು. ಅರ್ಹ ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ದಾಖಲಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಮೊದಲನೇ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿಎಸ್‍ಸಿ (ನರ್ಸಿಂಗ್‌), ಬಿ-ಫಾರ್ಮ, ಫಾರ್ಮಾ-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‍ಗಳ ಪ್ರವೇಶಕ್ಕಾಗಿ ಜು.22ರ ಸಂಜೆ 6ಗಂಟೆವರೆಗೆ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು(ಆಪ್ಷನ್) ಅಣಕು ಸೀಟು ಹಂಚಿಕೆ ಫಲಿತಾಂಶಕ್ಕೆ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಯುರ್ವೇದ, ಯುನಾನಿ, ನ್ಯಾಚುರೋಪತಿ, ಯೋಗಾ ಮತ್ತು ಹೋಮಿಯೋಪತಿ ಕೋರ್ಸ್‍ಗಳಿಗೆ ಸೀಟು ಮ್ಯಾಟ್ರಿಕ್ಸ್ ಇನ್ನೂ ಬಂದಿರದ ಕಾರಣ ಅಣಕು ಸೀಟು ಹಂಚಿಕೆಗೆ ಈ ಕೋರ್ಸ್‍ಗಳನ್ನು ಪರಿಗಣಿಸಿಲ್ಲ. ಸೀಟು ಮ್ಯಾಟ್ರಿಕ್ಸ್ ಬಂದ ನಂತರ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ಸೇರಿಸಲು/ ಬೇಡದಿದ್ದಲ್ಲಿ ಅಳಿಸಲು/ಕ್ರಮಾಂಕ ಬದಲಿಸಲು/ಮಾರ್ಪಡಿಸಲು ಜು.26ರಿಂದ ಜು.29ರ ಸಂಜೆ 5ಗಂಟೆವರೆಗೆ ಅವಕಾಶ ನೀಡಲಾಗಿದೆ. ಆ.1ರ ಬೆಳಿಗ್ಗೆ 11ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು. ಆ.2ರ ಮಧ್ಯಾಹ್ನ 2ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಬಳಿಕ ಛಾಯ್ಸ್ ಆಯ್ಕೆಗೆ ಆ.4ರಿಂದ ಆ.7ರವರೆಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದುವರೆಗೂ ಇಚ್ಛೆ/ಆಯ್ಕೆಗಳನ್ನು ದಾಖಲಿಸದೇ ಇರುವ ಅಭ್ಯರ್ಥಿಗಳು, ಇಷ್ಟವಿದ್ದಲ್ಲಿ 750 ರೂಪಾಯಿ ಪಾವತಿಸಿ, ಆಪ್ಷನ್ಸ್ ದಾಖಲಿಸಬಹುದು. ಮೊದಲ ಸುತ್ತಿಗೆ ನಿಗದಿಪಡಿಸಿರುವ ಕೊನೆ ದಿನಾಂಕದ ನಂತರ ಮುಂದಿನ ಯಾವುದೇ ಸುತ್ತಿಗೆ ಇಚ್ಛೆ- ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಕೋರ್ಸ್ ಶುಲ್ಕ ಇತ್ಯಾದಿ ನೋಡಿಕೊಂಡು, ಈಗಲೇ ತಮಗೆ ಇಷ್ಟವಾದ ಕಾಲೇಜು/ಕೋರ್ಸ್‍ಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News