×
Ad

ಎಡಿಜಿಪಿ ಚಂದ್ರಶೇಖರ್‌ ರನ್ನು ಕೋರ್ಟ್‍ನಲ್ಲೇ ಎದುರಿಸುತ್ತೇನೆ : ಕೇಂದ್ರ ಸಚಿವ ಕುಮಾರಸ್ವಾಮಿ

Update: 2024-10-12 17:53 IST

ಬೆಂಗಳೂರು : ‘ಎಡಿಜಿಪಿ ಚಂದ್ರಶೇಖರ್‌ಗೆ ನಾನು ಎಲ್ಲಿ ಬೆದರಿಕೆ ಹಾಕಿದ್ದೇನೆ? ರಾಜಕೀಯವಾಗಿ ಅವರು ನನ್ನ ವಿರುದ್ಧ ದೂರು ನೀಡಿದ್ದು, ನಾನೂ ಅವರಿಗೆ ಹೆದರಬೇಕಿಲ್ಲ. ಕೋರ್ಟ್‍ನಲ್ಲೇ ಎದುರಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮಾಧ್ಯಮಗಳ ಮುಂದೆಯೇ ಮಾತನಾಡಿದ್ದೇನೆ. ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆಯೇ ಹೊರತು ಯಾರಿಗೂ ಬೆದರಿಕೆ ಹಾಕಿಲ್ಲ. ಇದೀಗ ನನ್ನ ವಿರುದ್ಧ ದೂರು ನೀಡಿದ್ದಾರೆ, ಎದುರಿಸಬೇಕು ಎದುರಿಸೋಣ ಎಂದರು.

ನಾನು ಎಲ್ಲಿಯೂ ಹೆದರಿ ಓಡಿಹೋಗುವುದಿಲ್ಲ. ಅವರೂ ನನಗೆ ಹೆದರಬೇಕಾಗಿಲ್ಲ. ನನ್ನ ವಿರುದ್ಧ 12 ವರ್ಷಗಳಿಂದ ಗಣಿಗಾರಿಕೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಯಾವಾಗ ಕರೆದರೂ ಹೋಗಿದ್ದೇನೆ. ನಿನ್ನೆ ನೀಡಿದ ದೂರಿನ ಹಿಂದೆ ರಾಜಕೀಯ ಇದೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News