×
Ad

ʼಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆʼ: ಸಚಿವರು ಕಾಣೆಯಾಗಿದ್ದಾರೆ ಎಂಬ ಬಿಜೆಪಿ ಪೋಸ್ಟರ್‌ ಗೆ ಕಾಂಗ್ರೆಸ್‌ ತಿರುಗೇಟು

Update: 2023-10-19 18:20 IST

ಬೆಂಗಳೂರು: ʼʼಸಚಿವರು ಕಾಣೆಯಾಗಿದ್ದಾರೆʼʼ ಎಂಬ ಪೋಸ್ಟರ್‌ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿರುವ ಬಿಜೆಪಿ ರಾಜ್ಯ ಘಟಕಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. 

ʼʼಬಿಜೆಪಿ ನಾಯಕರ ಕಣ್ಣು ಕುರುಡಾದ ಕಾರಣ ಬೇರೆಯವರನ್ನು ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆʼʼ ಎಂದು ಕಾಂಗ್ರೆಸ್‌ X ನಲ್ಲಿ ಪ್ರತಿಕ್ರಿಯಿಸಿದೆ.

 ಅಲ್ಲದೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವುಬಿಜೆಪಿ ನಾಯಕರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್‌ ಪೋಸ್ಟ್‌ ಮಾಡಿದೆ.

ಕಾಂಗ್ರೆಸ್‌ ಹಂಚಿಕೊಂಡಿರುವ ಪೋಸ್ಟರ್‌  

ʼʼಚಿಕಿತ್ಸೆ ಪಡೆಯಲಿʼʼ

ʼʼಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆ ಉಂಟಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಕುರುಡುತನವನ್ನು ಸರಿಪಡಿಸಿಕೊಳ್ಳಲಿ. ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ, ದೃಷ್ಟಿ ದೋಷ ಸರಿಹೋಗಲಿ ಎಂದು ಹಾರೈಸುತ್ತೇವೆʼʼ ಕಾಂಗ್ರೆಸ್‌ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News