×
Ad

ಸುಳ್ಯ: ಪರಾರಿಯಾಗಿದ್ದ ದರೋಡೆ ಪ್ರಕರಣದ ಆರೋಪಿಯ ಬಂಧನ

Update: 2024-10-26 14:36 IST

ಆರೋಪಿ ಕಾರ್ತಿಕ್ 

ಸುಳ್ಯ: ಕೆಲ ದಿನಗಳ ಹಿಂದೆ ಇಲ್ಲಿನ ಸರಕಾರಿ ಆಸ್ಪತ್ರೆ ಬಳಿ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದ ಕಳ್ಳನನ್ನು ಸುಳ್ಯ ಪೊಲೀಸರು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ತಮಿಳುನಾಡು ಮೂಲದ ಕಾರ್ತಿಕ್ (38) ಎಂದು ಗುರುತಿಸಲಾಗಿದೆ. ಸಂಪಾಜೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಈತ​ನನ್ನು ಪೊಲೀಸರು ತಮಿಳುನಾಡಿನಿಂದ ಸೆರೆಹಿಡಿದು ಸುಳ್ಯಕ್ಕೆ ಕರೆ ತಂದಿದ್ದರು.

ಆತನ ಆರೋಗ್ಯ ತಪಾಸಣೆಗೆಂದು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ಅಂದು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿ ತಮಿಳುನಾಡು ಕಡೆಗೆ ಹೋಗಿದ್ದ ಎಂಬ ಸಂಶಯ ವ್ಯಕ್ತವಾಗಿತ್ತು.

ಪೊಲೀಸರು ಆತನನ್ನು ತಮಿಳುನಾಡಿನ ಸತ್ಯಮಂಗಲ ಪರಿಸರದಲ್ಲಿ ವಶಕ್ಕೆ ಪಡೆದು ಸುಳ್ಯಕ್ಕೆ ಕರೆ ತಂದಿದ್ದಾರೆ‌ ಎಂದು ತಿಳಿದುಬಂದಿದೆ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News