ಜೆಡಿಯು ಸಂಸದರು, ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ: ಸುಶೀಲ್ ಮೋದಿ
ಸುಶೀಲ್ ಮೋದಿ, ಫೋಟೋ: ANI
ಹೊಸದಿಲ್ಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವಿಭಜನೆಯಾದ ಕೆಲವೇ ದಿನಗಳಲ್ಲಿ ಬಿಹಾರದಲ್ಲಿ ಇದೇ ರೀತಿಯ ಪರಿಸ್ಥಿತಿ ಉಂಟಾಗುತ್ತಿದೆ ಹಾಗೂ ಹಲವಾರು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದರು ಮತ್ತು ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಸುಶೀಲ್ ಮೋದಿ ಹೇಳಿದರು.
ಯಾವಾಗ ನಿತೀಶ್ ಕುಮಾರ್ ಮುಂದಿನ ಹೋರಾಟಕ್ಕೆ ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಸ್ವೀಕರಿಸಿ ತೇಜಸ್ವಿ ಯಾದವ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೋಅಂದಿನಿಂದ ಜೆಡಿಯುನಲ್ಲಿ ಬಂಡಾಯದ ವಾತಾವರಣವಿದೆ. ಹೆಚ್ಚಿನ ಸಂಖ್ಯೆಯ ಸಂಸದರಿಗೆ ತಮಗೆ ಟಿಕೆಟ್ ಸಿಗಲಾರದೆಂದು ತಿಳಿದಿದೆ ”ಎಂದು ಮೋದಿ ಹೇಳಿದರು.
ಕಳೆದ ವರ್ಷ ಜೆಡಿಯು 17 ಸ್ಥಾನ ಪಡೆದಿತ್ತು, ಈ ಬಾರಿ ಜೆಡಿಯು 17 ಸ್ಥಾನ ಪಡೆಯಲಿದೆಯೇ? ಇಂದಿನ ಪರಿಸ್ಥಿತಿಯಲ್ಲಿ ಜೆಡಿಯು 8-10ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಹಾಗಾಗಿ ನಿತೀಶ್ ಕುಮಾರ್ ನಂತರ ತಮ್ಮ ಭವಿಷ್ಯ ಏನು ಎಂದು ಸಂಸದರೂ ಯೋಚಿಸುತ್ತಿದ್ದಾರೆ. ಅಲ್ಲಿ ಭವಿಷ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಕತ್ತಲೆಯಲ್ಲಿ ನೋಡುತ್ತಿದ್ದಾರೆ. ಹೀಗಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸದರು, ಶಾಸಕರು ಬೇರೆ ಪಕ್ಷಗಳನ್ನು ಸಂಪರ್ಕಿಸುತ್ತಿದ್ದಾರೆ. ಕಾಲ್ತುಳಿತದಂತಹ ಪರಿಸ್ಥಿತಿ ಇದೆ ಎಂದು ಸುಶೀಲ್ ಮೋದಿ ಹೇಳಿದರು.
ಹಲವಾರು ಜೆಡಿಯು ಸಂಸದರು ಮತ್ತು ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸುಶೀಲ್ ಮೋದಿ ಸುಳಿವು ನೀಡಿದ್ದಾರೆ. "ಹೆಚ್ಚಿನ ಸಂಖ್ಯೆಯ ಸಂಸದರು ಮತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಯಾರನ್ನು ತೆಗೆದುಕೊಳ್ಳುತ್ತೇವೆ ಅಥವಾ ತೆಗೆದುಕೊಳ್ಳುವುದಿಲ್ಲ ಎಂಬುದು ಹಲವು ವಿಷಯಗಳ ಮೇಲೆ ಅವಲಂಬಿತವಾಗಿದೆ ಆದರೆ ಒಟ್ಟಾರೆಯಾಗಿ ಅಸ್ಥಿರತೆಯ ವಾತಾವರಣವಿದೆ. ಜೆಡಿಯುನಲ್ಲಿ ದುಃಖವಿದೆ’’ ಎಂದರು.