×
Ad

ಅಮೆರಿಕಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ - ಕ್ರಿಕೆಟಿಗ ಶಾಹಿದ್‌ ಅಫ್ರೀದಿ ಭೇಟಿ: ವಿಡಿಯೋ ವೈರಲ್

Update: 2023-08-18 21:06 IST

ವಾಷಿಂಗ್ಟನ್:‌ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರೀದಿ ಅಮೆರಿಕಾದಲ್ಲಿ ಭೇಟಿ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಇಬ್ಬರು ಸೆಲೆಬ್ರಿಟಿಗಳು ಮಾತುಕತೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ತಮ್ಮ ಕ್ರಿಕೆಟ್‌ ಪ್ರತಿಭೆಯಿಂದ ಭಾರತದಲ್ಲಿಯೂ ಅಭಿಮಾನಿಗಳನ್ನು ಅಫ್ರಿದಿ ಹೊಂದಿದ್ದಾರೆ. ನಟ ಸುನೀಲ್‌ ಶೆಟ್ಟಿ ಕೂಡಾ ಪಾಕಿಸ್ತಾನದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಬ್ಬರ ಈ ಅನಿರೀಕ್ಷಿತ ಭೇಟಿಯು ಪರಸ್ಪರ ಅಭಿಮಾನಿಗಳಲ್ಲಿ ಸಂತಸ ತಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News