Tumakur | ಚಿನ್ನದಂಗಡಿಯಿಂದ ವಜ್ರದ ಉಂಗುರ ಹೊತ್ತೊಯ್ದ ಇಲಿ; ಸಿಸಿಟಿವಿ ದೃಶ್ಯದಿಂದ ಬಯಲು

ಬಿಲ ಅಗೆದಾಗ ಸಿಕ್ಕಿತು ಆಭರಣಗಳ ಖಜಾನೆ!

Update: 2026-07-31 00:07 IST

ತುಮಕೂರು : ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಸುಮಾರು 10 ಲಕ್ಷ ರೂ. ಬೆಲೆ ಬಾಳುವ ವಜ್ರ ಖಚಿತ ಉಂಗುರ ಕಾಣೆಯಾದ ಹಿನ್ನೆಲೆಯಲ್ಲಿ ಪೊಲೀಸ್ ದೂರು ಕೊಡಬೇಕೆಂಬ ತೀರ್ಮಾನಕ್ಕೆ ಬಂದ ಸಿಬ್ಬಂದಿ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿರುವುದು ವರದಿಯಾಗಿದೆ.

ನಗರದದ ವಿಶ್ವಾಸ್ ಜ್ಯುವೆಲ್ಲರಿಯಲ್ಲಿ ಈ ಅಚ್ಚರಿಯ ಬೆಳಕಿಗೆ ಬಂದಿದೆ. ಅಂಗಡಿಯ ಬಾಕ್ಸ್ ನಲ್ಲಿ ಇಟ್ಟಿದ್ದ ಸುಮಾರು 10 ಲಕ್ಷರೂ ಬೆಲೆಬಾಳುವ ಉಂಗುರವೊಂದು ಕಾಣೆಯಾಗಿತ್ತು. ಇದರಿಂದ ಆತಂಕಗೊಂಡ ಅಂಗಡಿಯ ಮಾಲಕರು ಅಂಗಡಿಯ ಶಟರ್, ಬೀಗ ಎಲ್ಲವನ್ನು ಪರಿಶೀಲಿಸಿದ್ದಾರೆ. ಯಾವುದೂ ಮುರಿದು ಹೋಗಿರುವ, ಒಡೆದು ಹೋಗಿರುವ ಕುರುಹುಗಳು ಕಂಡುಬಂದಿಲ್ಲ. ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಿಚಾರಿಸಿ, ನಂತರ ಪೊಲೀಸ್ ಕಂಪ್ಲೆಟ್ ಕೊಡುವ ತಯಾರಿ ನಡೆಸುತ್ತಿದ್ದರು. ಆದಕ್ಕೆ ಮೊದಲು ಅಂಗಡಿಯ ಸಿಸಿಟಿವಿ ಪರಿಶಿಲಿಸಿದಾಗ, ಇಲಿಯೊಂದು ಬಿಲದಿಂದ ಬಂದು ವಜ್ರ ಖಚಿತ ಉಂಗುರ ಕಚ್ಚಿಕೊಂಡು ಹೋಗುವ ದೃಶ್ಯ ಕಂಡು ಬಂದಿದೆ. ಇದರಿಂದ ಆತಂಕದಲ್ಲಿದ್ದ ಸಿಬ್ಬಂದಿ ಮತ್ತು ಮಾಲಕರು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟರು.

ಇಲಿ ಹೋದ ಜಾಡು ಹಿಡಿದು ಅಗೆದಾಗ, ಮತ್ತಷ್ಟು ಅಚ್ಚರಿಯಾಗಿದೆ. ಅಲ್ಲಿ ಕಂಡು ಬಂದಿದ್ದು, ಹತ್ತಕ್ಕೂ ಹೆಚ್ಚು ಉಂಗುರ, ಒಂದು ನೆಕ್‌ಲೆಸ್ ಹಾಗೂ ಸಣ್ಣಪುಟ್ಟ ಚಿನ್ನದ ಆಭರಣಗಳು ಕಂಡು ಬಂದಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News