ತುಮಕೂರು | ರೀಲ್ಸ್ ಮಾಡುತ್ತಿದ್ದ ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ
Update: 2026-06-28 10:43 IST
ತುಮಕೂರು: ರೀಲ್ಸ್ ಮಾಡಲು ಹೋಗಿ ಉಪನ್ಯಾಸಕನೊಬ್ಬ ದೇವರಾಯನದುರ್ಗ ಬೆಟ್ಟದಿಂದ ಬಿದ್ದು ಗಾಯಗೊಂಡಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಗಾಯಾಳುವನ್ನು ತುಮಕೂರು ತಾಲೂಕು ಬುಗುಡನಹಳ್ಳಿ ಸಮೀಪದ ಬಳ್ಳಾಪುರ ಗ್ರಾಮದ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.
ಪಿಯು ಕಾಲೇಜು ಉಪನ್ಯಾಸಕರಾಗಿರುವ ಶಿವಪ್ರಸಾದ್ ರವಿವಾರ ಬೆಳಗ್ಗೆ ದೇವರಾಯನದುರ್ಗ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಲು ಮಂದಾಗಿದ್ದಾರೆ. ರೀಲ್ಸ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೆಟ್ಟದ ಪ್ರವಾಸದಲ್ಲಿದ್ದ ಇತರರು ಗಮನಿಸಿ, ತಕ್ಷಣವೇ ಮೇಲಕ್ಕೆತ್ತಿದ್ದಾರೆ.
ಸದ್ಯ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.