ಉಡುಪಿ: ಮೀಲಾದ್ ಜಾಥಾ-ಮೀಲಾದ್ ಕಾನ್ಫರೆನ್ಸ್ ಸಿದ್ಧತಾ ಸಭೆ
ಉಡುಪಿ, ಆ.13: ಉಡುಪಿ ಜಿಲ್ಲೆಯ ಎಲ್ಲಾ ಸುನ್ನೀ ಸಂಘಟನೆಗಳ ಸಂಯುಕ್ತ ಒಕ್ಕೂಟ ಜಿಲ್ಲಾ ಸುನ್ನೀ ಕೋ-ಆರ್ಡೀನೇಷನ್ ಸಮಿತಿ ಇದರ ಅಧೀನದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್‌ರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಬೃಹತ್ ಮೀಲಾದ್ ಜಾಥಾ ಹಾಗೂ ಮೀಲಾದ್ ಕಾನ್ಫರೆನ್ಸ್ ಸಿದ್ದತಾ ಸಭೆ ಇತ್ತೀಚೆಗೆ ಉಡುಪಿ ಸುನ್ನೀ ಕಾರ್ಯಾಲಯದಲ್ಲಿ ನಡೆಯಿತು.
ಸ್ವಾಗತ ಸಮಿತಿ ಚೆಯರ್‌ಮೆನ್ ಸಯ್ಯಿದ್ ಜುನೈದ್ ತಂಙಳ್ ರಂಗನಕೆರೆ ದುಆಃ ನೆರವೇರಿಸಿದರು. ಸಯ್ಯಿದ್ ಜಅಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಸಭೆಯನ್ನು ಉದ್ಘಾಟಿಸಿದರು. ಕೋ-ಆರ್ಡೀನೇಷನ್ ಅಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅಧ್ಯಕ್ಷತೆ ವಹಿಸಿದ್ದರು.
ಸೆ.13ರಂದು ಜಿಲ್ಲಾ ಮಟ್ಟದ ಬೃಹತ್ ಮೀಲಾದ್ ಜಾಥಾ ಹಾಗೂ ಮೀಲಾದ್ ಕಾನ್ಫರೆನ್ಸ್ ಉಡುಪಿ ನಗರದಲ್ಲಿ ವಿಜ್ರಂಭಣೆಯಿಂದ ನಡೆಸುವ ಕುರಿತು ಜಿಲ್ಲೆಯ 8 ಕೇಂದ್ರಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೋ-ಆರ್ಡೀನೇಷನ್ ಸಮಿತಿ ನಾಯಕರಾದ ವಾಸೀಮ್ ಬಾಷಾ ಕುಂದಾಪುರ, ಮೊಹಿದ್ದೀನ್ ಕಟಪಾಡಿ, ಹಮೀದ್ ಅದ್ದು ಮುಳೂರು, ಅಬೀದ್ ಅಲಿ ಸಂತೋಷ್ ನಗರ, ಹುಸೈನ್ ಸಅದಿ ಕಾರ್ಕಳ, ಅಡ್ವೋಕೇಟ್ ಹಂಝತ್ ಹೆಜಮಾಡಿ, ಅಬ್ದುರ‌್ರಝಾಖ್ ಖಾಸಿಮಿ ಕಾಪು, ಅಡ್ವೋಕೇಟ್ ಇಲ್ಯಾಸ್ ನಾವುಂದ, ಪಿ.ಎಚ್.ಉಸ್ಮಾನ್ ಕೆರೆಬಳಿ, ಇಲ್ಯಾಸ್ ಕಟಪಾಡಿ ಉಪಸ್ಥಿತರಿದ್ದರು.
ಕೋ ಆರ್ಡಿನೇಷನ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬುಹಾನ್ ಹೊನ್ನಾಳ ಸ್ವಾಗತಿಸಿದರು. ಸ್ವಾಗತ ಸಮಿತಿ ಸಂಚಾಲಕ ಕೆ.ಎಚ್.ಅಶ್ರಫ್ ಪುರ್ಖಾನಿ ಉಚ್ಚಿಲ ವಂದಿಸಿದರು.