×
Ad

ಯುವಕ ನಾಪತ್ತೆ

Update: 2025-08-26 19:29 IST

ಉಡುಪಿ, ಆ.26: ನಗರದ ಲಾಡ್ಜ್‌ವೊಂದರಲ್ಲಿ ಕಳೆದ ಎರಡು ತಿಂಗಳು ಮ್ಯಾನೆಜರ್ ಕೆಲಸ ಮಾಡಿಕೊಂಡಿದ್ದ ಸೈಯದ್ ಇಮ್ರಾನ್ (41) ಎಂಬವರು ಕಳೆದ ಫೆಬ್ರವರಿ 23ರಂದು ಲಾಡ್ಜ್‌ನಿಂದ ಕೆಲಸದ ನಿಮಿತ್ತ ಹೊರಗೆ ಹೋದವರು ವಾಪಾಸು ಬಾರದೇ, ತನ್ನ ಊರಿಗೂ ಹೋಗದೇ ನಾಪತ್ತೆಯಾಗಿದ್ದಾರೆ.

170 ಸೆಂ.ಮೀ ಎತ್ತರ, ದಪ್ಪ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News