ಉಚಿತ ಆಯುರ್ವೇದ ಚಿಕಿತ್ಸಾ ಆರೋಗ್ಯ ಶಿಬಿರ ಉದ್ಘಾಟನೆ
ಶಿರ್ವ, ಸೆ.2: ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ ಶಂಕರಪುರ ಮತ್ತು ಇನ್ನಂಜೆ ಮಹಿಳಾ ಮಂಡಲ ಇನ್ನಂಜೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಮತುತಿ ಚಿಕಿತ್ಸಾ ಶಿಬಿರವನ್ನು ರವಿವಾರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟಪಾಡಿಯ ವೈದ್ಯ ಡಾ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ನಮ್ಮ ಆರೋಗ್ಯವನ್ನು ಶಾಶ್ವತವಾಗಿ ಕಾಪಾಡಲು ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ. ಆಲೋಪತಿಯಲ್ಲಿ ರೋಗ ತಕ್ಷಣ ಗುಣವಾಗುತ್ತದೆ. ಆದರೆ ಅಯುರ್ವೇದ ದಲ್ಲಿ ನಿರಂತರ ಆರೋಗ್ಯವಾಗಿರಲು ಬೇಕಾದ ಚಿಕಿತ್ಸೆ, ಔಷಧಿಗಳು ಹಾಗೂ ಜೀವನಕ್ರಮದ ಪಾಠ ಸಿಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಅಯುರ್ವೇದ ಬಳಸಬೇಕು ಎಂದು ತಿಳಿಸಿದರು.
ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಮುಖ್ಯ ವೈದಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನಂಜೆ ಮಹಿಳಾ ಮಂಡಲದ ಅಧ್ಯಕ್ಷೆ ಶ್ವೇತಾ ಎಲ್.ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಆಯುರ್ವೇದ ಚಿಕಿತ್ಸಾ ಹಾಗೂ ಸ್ವಾಸ್ಥ್ಯ ಕೇಂದ್ರ ಕಾರ್ಯ ನಿರ್ವಹಾಣಾಧಿಕಾರಿ ಡಾ.ರಮೇಶ ಮಿತ್ತಾಂತಾಯ, ಟ್ರಸ್ಟಿ ಪದ್ಮನಾಭ ಭಟ್, ಗೌರವ ಸಲಹೆಗಾರ ಸಕ್ಕೂಬಾಯಿ ಇನ್ನಂಜೆ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಟ್ರಸ್ಟಿ ಸಿಎ ಹರಿದಾಸ ಭಟ್ ವಹಿಸಿದ್ದರು. ಕೇಂದ್ರದ ತನುಜಾ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ವಂದಿಸಿದರು. ಶಿಬಿರದಲ್ಲಿ ಮಣಿಪಾಲ ಮುನಿಯಾಲು ಆಯುರ್ವೇದಿಕ್ ಆಸ್ಪತ್ರೆಯ ತಜ್ಞ ವೈದ್ಯಾದಿಕಾರಿಗಳು ಭಾಗವಹಿಸಿದ್ದು, 84 ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡರು.