ಬಿಹಾರ ಮೂಲಕ ಕಾರ್ಮಿಕ ಆತ್ಮಹತ್ಯೆ
Update: 2025-10-07 20:42 IST
ಕುಂದಾಪುರ, ಅ.7: ಬಿಹಾರ ಮೂಲದ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಇಂದು ಬೆಳಗ್ಗೆ ಗೋಪಾಡಿ ಗ್ರಾಮದ ಕುಂದೇಶ್ವರ ಎಂಬಲ್ಲಿ ನಡೆದಿದೆ.
ಮೃತರನ್ನು ಬಿಹಾರದ ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಗೋಪಾಡಿ ಗ್ರಾಮದ ಕುಂದೇಶ್ವರ ಗ್ರಾನೆಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ವಿಪರೀತ ಮಧ್ಯ ಸೇವನೆಯ ಚಟ ಹೊಂದಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಗ್ರಾನೆಟ್‌ನ ಹಿಂಬದಿಯ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.