×
Ad

ಅಕ್ರಮ ಮರಳುಗಾರಿಕೆಗೆ ದಾಳಿ: ವಾಹನ ವಶಕ್ಕೆ

Update: 2025-10-08 21:22 IST

ಕೋಟ, ಅ.8: ನಂಚಾರು ಗ್ರಾಮದ ಚೀನಿಬೆಟ್ಟು ಚೌಂಡಾಲ ಸೀತಾನದಿ ಹೊಳೆಯಲ್ಲಿ ಅ.8ರಂದು ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಾಳಿ ನಡೆಸಿದ ಕೋಟ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಪಿಕ್‌ಅಪ್ ವಾಹನ ಹಾಗೂ ಸುಮಾರು 5,000ರೂ. ಮೌಲ್ಯದ ಮರಳನ್ನು ಸ್ವಾದೀನಪಡಿಸಿ ಕೊಳ್ಳಲಾಗಿದೆ. ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಗಣೇಶ್ ಶೆಟ್ಟಿ ನಂಚಾರು ಹಾಗೂ ಚೇತನ ನಾಯ್ಕ ಎಂಬವರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News