ಇಸ್ಪೀಟು ಜುಗಾರಿ: ಐವರ ಬಂಧನ
Update: 2026-05-08 21:23 IST
ಗಂಗೊಳ್ಳಿ, ಮೇ 8: ನಾಡ ಗ್ರಾಮದ ಕೊಡಗುಂಜಿ ಸೇತುವೆ ಬಳಿ ಮೇ 7ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಳುವಿನ ಬಾಗಿಲುವಿನ ರತ್ನಾಕರ ಕಾಂಚನ್(55), ಒಕ್ಕೇರಿಯ ಸಂತೋಷ್ ಪೂಜಾರಿ(46), ಪಡುಕೋಣೆಯ ರಾಘವೇಂದ್ರ(28), ರಾಜೇಶ್ ಪೂಜಾರಿ(42), ಬಾಬು ಮೊಗವೀರ(50) ಬಂಧಿತ ಆರೋಪಿಗಳು. ಇವರಿಂದ 13,020ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.