×
Ad

ನದಿಗೆ ಬಿದ್ದು ಮೀನುಗಾರ ಮೃತ್ಯು

Update: 2026-05-08 21:26 IST

ಮಲ್ಪೆ, ಮೇ 8: ಮೀನುಗಾರರೊಬ್ಬರು ಆಯತಪ್ಪಿ ನದಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮೇ 8ರಂದು ಬೆಳಗ್ಗಿನ ಜಾವ ನಡೆದಿದೆ.

ಮೃತರನ್ನು ಕಲ್ಯಾಣಪುರ ಹೊನ್ನಪ್ಪಕುದ್ರುವಿನ ತನ್ಯ ತಿಂಗಳಾಯ(70) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಮಾಡುತ್ತಿರುವಾಗ ಆಯತಪ್ಪಿ ನದಿಯ ನೀರಿಗೆ ಬಿದ್ದರೆನ್ನಲಾಗಿದೆ. ಅವರನ್ನು ಸ್ಥಳಿಯರು ಕೂಡಲೇ ಮೇಲಕ್ಕೆ ತಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ತನ್ಯ ಈಗಾಗಲೇ ಮೃತ ಪಟ್ಟಿರುವು ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News