×
Ad

ಈಜು ತರಬೇತುದಾರರಿಗೆ ವಂಚನೆ: ಪ್ರಕರಣ ದಾಖಲು

Update: 2026-05-08 21:36 IST

ಕೋಟ, ಮೇ 8: ಈಜು ತರಬೇತುದಾರ ಗುಂಡ್ಮಿಯ ಗೋಪಾಲ ಖಾರ್ವಿ ಎಂವರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಪಾಲ ಖಾರ್ವಿಯ ಸಂಬಂಧಿಗಳಾದ ರವೀಂದ್ರ ಖಾರ್ವಿ ಮತ್ತು ಪ್ರೀತು ವ್ಯವಹಾರದ ಸಲುವಾಗಿ 9,50,000 ರೂ. ಹಣವನ್ನು ಗೋಪಾಲ ಖಾರ್ವಿ ಅವರಿಂದ ಪಡೆದುಕೊಂಡಿದ್ದು, ಇದರಲ್ಲಿ 6,27,000ರೂ. ಹಣ ವನ್ನು ನೀಡಿ ದ್ದರು. ಉಳಿದ 3,23,000ರೂ. ಹಣ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ, ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News