×
Ad

ಗಾಳಿ-ಮಳೆ: ಮನೆ ಮೇಲೆ ಮರ ಬಿದ್ದು ಹಾನಿ

Update: 2026-05-09 20:16 IST

ಫೈಲ್‌ ಫೋಟೊ

ಉಡುಪಿ, ಮೇ 9: ಶುಕ್ರವಾರ ಸಂಜೆ ಬೀಸಿದ ಗಾಳಿ-ಮಳೆಗೆ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ ಅಲ್ಲಲ್ಲಿ ಹಾನಿ ಸಂಭವಿಸಿರುವ ವರದಿ ಬಂದಿದೆ. ಕಾರ್ಕಳದ ಮಾಧವ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 10,000ರೂ.ಗಳ ನಷ್ಟ ಸಂಭವಿಸಿದೆ.

ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದಲ್ಲಿ ಬೀಸಿದ ಗಾಳಿಗೆ ಮರವೊಂದು ಬಿದ್ದು ಪೂರ್ಣಿಮಾ ಎಂಬವರ ಜಾನುವಾರು ಮೃತಪಟ್ಟಿದೆ ಎಂದು ಹೆಬ್ರಿ ತಹಶೀಲ್ದಾರರು ತಿಳಿಸಿದ್ದಾರೆ. ಅದೇ ರೀತಿ ಹೆಬ್ರಿಯ ಅಮಿತಾ ಭಟ್ ಇವರ ಮನೆ ಮಳೆ ಯಿಂದ ಭಾಗಶ: ಹಾನಿಗೊಂಡಿದ್ದು 25 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಬೀಸಿದ ಗಾಳಿಗೆ ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಿಗೂ ಹಾನಿಯಾದ ವರದಿ ಬಂದಿದೆ. ಹೆಬ್ರಿಯ ಗಾಡ್ವಿನ್ ಸುಧೀರ್ ಎಂಬವರ ತೋಟಗಾರಿಕಾ ಬೆಳೆಗೆ 20ಸಾವಿರ ನಷ್ಟವಾದರೆ, ಕಾರ್ಕಳ ತಾಲೂಕಿನ ಕಡ್ತಲದ ಆನಂದ ನಾಯಕ್ ಎಂಬವರ ತೋಟಗಾರಿಕಾ ಬೆಳೆಗೆ 10 ಸಾವಿರದಷ್ಟು ನಷ್ಟ ಸಂಭವಿಸಿದೆ.

ಶುಕ್ರವಾರ ಸಂಜೆ ಕಾಪುವಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಅಲ್ಲಿ 32.4ಮಿ.ಮೀನಷ್ಟು ಮಳೆಯಾದರೆ, ಹೆಬ್ರಿಯಲ್ಲಿ 12.7ಮಿ.ಮೀ.ನಷ್ಟು ಮಳೆ ಸುರಿದಿದೆ.ಉಳಿದಂತೆ ಕಾರ್ಕಳದಲ್ಲಿ 6.7ರಷ್ಟು ಮಳೆಯಾದ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News