ಗಂಗೊಳ್ಳಿ: ಸುಬ್ರಹ್ಮಣ್ಯ ಬಾಯರಿಗೆ ಬೀಳ್ಕೊಡುಗೆ
Update: 2026-05-09 20:23 IST
ಕುಂದಾಪುರ, ಮೇ 9: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕ ರಾಗಿ ಸೇವೆ ಸಲ್ಲಿಸಿ, ಇದೀಗ ಪದೋನ್ನತಿಗೊಂಡು ವರ್ಗಾವಣೆಗೊಂಡಿರುವ ಸುಬ್ರಹ್ಮಣ್ಯ ಬಾಯರಿ ಅವರಿಗೆ ಶಾಖೆಯ ವತಿಯಿಂದ ಬ್ಯಾಂಕಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾುತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎಜಿಎಂ ಮೋಹನ್‌ದಾಸ್ ಹೆಬ್ಬಾರ್, ಶಾಖಾ ನಿರೀಕ್ಷಕ ರಾಘವೇಂದ್ರ ಉಡುಪ, ತ್ರಾಸಿ ಶಾಖೆಯ ವ್ಯವಸ್ಥಾಪಕ ವೆಂಕಟೇಶ್ ಬಿಲ್ಲವ, ಗಂಗೊಳ್ಳಿ ಶಾಖೆಯ ನೂತನ ವ್ಯವಸ್ಥಾಪಕ ಗಣೇಶ್ ಭಟ್ ಹಾಗೂ ಕಟ್ಟಡದ ಮಾಲಕ ವೆಂಕಟೇಶ ಮಲ್ಯ, ಬ್ಯಾಂಕಿನ ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಬ್ಯಾಂಕಿನ ಸಿಬ್ಬಂದಿ ಸುಧೀಂದ್ರ ಸ್ವಾಗತಿಸಿದರು. ಗಣೇಶ್ ಭಟ್ ವಂದಿಸಿದರು. ವಿಕ್ರಮ್ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.