ಮಟ್ಕಾ ಜುಗಾರಿ: ಓರ್ವ ವಶಕ್ಕೆ
Update: 2026-05-09 20:45 IST
ಬ್ರಹ್ಮಾವರ, ಮೇ 9: ಬ್ರಹ್ಮಾವರ ಬಸ್ ನಿಲ್ದಾಣದ ಸಮೀಪ ಮೇ 8ರಂದು ರಾತ್ರಿ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಓರ್ವ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಚಂದ್ರಶೇಖರ ಎಂದು ಗುರುತಿಸಲಾಗಿದೆ. ಈತ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ಹಣವನ್ನು ಮಲ್ಪೆಯ ಕಿಶೋರ್ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದಾನೆ. ಚಂದ್ರಶೇಖರ್‌ನಿಂದ 740ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.