×
Ad

ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ

Update: 2026-05-16 22:06 IST

ಉಡುಪಿ, ಮೇ 16: ಸಂತೆಕಟ್ಟೆಯ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ್ ಮೂಲದ ಅನಿಲ್ ಸಿಂಗ್(31) ಎಂಬವರು ಮೇ 15ರಂದು ರಾತ್ರಿ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ವಿಪರೀತ ಕುಡಿತದ ಚಟ ಹೊಂದಿದ್ದ ಕಲ್ಯಾ ಗ್ರಾಮದ ಕುಂಟಾಡಿಯ ಶೇಖರ ಪೂಜಾರಿ,(72) ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೇ 15ರಂದು ರಾತ್ರಿ ವೇಳೆ ಮನೆಯ ಕೊಟ್ಟಿಗೆಯ ಹೊರಗಡೆ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಕೌಟುಂಬಿಕ ವಿಚಾರವಾಗಿ ಮನನೊಂದ ಗೋವಾದ ಜಹೀರ್ ಅಬ್ದುಲ್ ಮಾಂಗಾವಕರ್(42) ಎಂಬವರು ಬೆಳಪುವಿನಲ್ಲಿರುವ ತನ್ನ ಪತ್ನಿಯ ಮನೆ ಎದುರಿನ ಮರಕ್ಕೆ ಇಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News