ಸೂರತ್ - ಮಂಗಳೂರು ಜಂಕ್ಷನ್ ರೈಲು ಇನ್ನು ಖಾಯಂ
ಉಡುಪಿ, ಮೇ 29: ಗುಜರಾತ್‌ನ ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಾರಕ್ಕೆರಡು ಸಲ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಖಾಯಂಗೊಳಿಸಲಾಗಿದೆ.ರೈಲು ನಂ.19057 ಹಾಗೂ 19058 ಆಗಿ ಈ ರೈಲು ಜೂನ್ 3ರಿಂದ ಸೂರತ್‌ನಿಂದ ಹಾಗೂ ಜೂ.4 ರಿಂದ ಮಂಗಳೂರು ಜಂಕ್ಷನ್‌ನಿಂದ ಸಂಚಾರ ನಡೆಸಲಿದೆ.
ಸೂರತ್- ಮಂಗಳೂರು ಜಂಕ್ಷನ್ ವಾರಕ್ಕೆರಡು ಸಲ ಸಂಚರಿಸುವ ರೈಲು ಜೂ.3ರಿಂದ ಪ್ರತಿ ಬುಧವಾರ ಹಾಗೂ ರವಿವಾರಗಳಂದು ಸೂರತ್‌ನಿಂದ ರಾತ್ರಿ 7:35ಕ್ಕೆ ಹೊರಡಲಿದ್ದು, ಮರುದಿನ ಸಂಜೆ 7:45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ನಂ.19058 ಮಂಗಳೂರು ಜಂಕ್ಷನ್- ಸೂರತ್ ವಾರಕ್ಕೆರಡು ಸಲ ಸಂಚರಿಸುವ ರೈಲು ಜೂ.4ರಿಂದ ಪ್ರತಿ ಗುರುವಾರ ಹಾಗೂ ಸೋಮವಾರ ರಾತ್ರಿ 10:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದ್ದು, ಮರುದಿನ ರಾತ್ರಿ 11:45ಕ್ಕೆ ಸೂರತ್ ನಿಲ್ದಾಣ ತಲುಪಲಿದೆ.
ಈ ರೈಲಿಗೆ ಉದ್ನಾ ಜಂಕ್ಷನ್, ವಲ್ಸಾಡ್, ವಾಪಿ, ಪಲ್ಗಾರ್, ವಾಸೈ ರೋಡ್, ಬಿವಂಡಿ ರೋಡ್, ಪನ್ವೇಲ್, ಪೆನ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ್ ರೋಡ್, ವೈಭವವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಾಲ, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾನಕೋನಾ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ರೈಲಿನಲ್ಲಿ ಒಟ್ಟು 20 ಬೋಗಿಗಳಿದ್ದು, ಇವುಗಳಲ್ಲಿ ಟೂ ಟಯರ್ ಎಸಿ ಒಂದು ಕೋಚ್, ತ್ರಿಟಯರ್ ಎಸಿ 7 ಕೋಚ್, ಸ್ಲೀಪರ್ 6 ಕೋಚ್, ಜನರಲ್ 4 ಕೋಚ್ ಹಾಗೂ ಎಸ್‌ಎಲ್‌ಆರ್-ಡಿ 2 ಕೋಚ್‌ಗಳಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.